ರಿಝ್ವಾನಾ ಬೇಗಂರಿಗೆ ಪಿಎಚ್‌ಡಿ ಪದವಿ

ಮಂಗಳೂರು, ಎ. 20: ಚಿಕ್ಕಮಗಳೂರಿನ ಎನ್.ಆರ್.ಪುರ ನಿವಾಸಿ ಪ್ರಸ್ತುತ ಕೊಪ್ಪದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರಿಝ್ವಾನಾ ಬೇಗಂ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ರಿಝ್ವಾನಾ ಬೇಗಂ ಅವರು ‘ಎ ಸ್ಟಡಿ ಆನ್ ಬ್ರಾಂಡ್ ಪೊಝಿಶನಿಂಗ್ ಆಫ್ ಸಿಲೆಕ್ಟಡ್ ಅಪ್ಪಾರಲ್ ಬ್ರಾಂಡ್ಸ್ ಇನ್ ಕರ್ನಾಟಕ’ ವಿಷಯದಲ್ಲಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದೆ.
ಶಿವಮೊಗ್ಗದ ಸಹ್ಯಾದ್ರಿ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಕೆ.ಎಸ್.ಸರಳ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧ ಮಂಡನೆ ಮಾಡಿದ್ದಾರೆ.
Next Story





