ಕಾಂಗ್ರೆಸ್ ಅಭ್ಯರ್ಥಿ ಕೆ. ವಸಂತ ಬಂಗೇರ ಆಸ್ತಿ ವಿವರ ಸಲ್ಲಿಕೆ
ಬೆಳ್ತಂಗಡಿ, ಎ. 20: ಕಾಂಗ್ರೆಸ್ ಅಭ್ಯರ್ಥಿ ಕೆ. ವಸಂತ ಬಂಗೇರ ಅವರು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿಗಳ ವಿವರವನ್ನು ಸಲ್ಲಿಸಿದ್ದಾರೆ.
ಕೆ. ವಸಂತ ಬಂಗೇರ ಹಾಗೂ ಅವರ ಪತ್ನಿ ಸುಜಿತಾ ಬಂಗೇರ ಅವರ ಹೆಸರಲ್ಲಿ ನಗದು, ಪಾಲಿಸಿ, ವಾಹನಗಳು, ಚಿನ್ನಾಭರಣ, ಕೃಷಿ ಹಾಗೂ ಕೃಷಿಯೇತರ ಭೂಮಿ ಸೇರಿದಂತೆ ಒಟ್ಟು 9 ಕೋಟಿ, 3 ಲಕ್ಷ ರೂ. ಮೌಲ್ಯದ ಆಸ್ತಿ, ನಗದು, ಸೊತ್ತುಗಳಿವೆ.
ವಸಂತ ಬಂಗೇರ ಅವರಲ್ಲಿ ಬ್ಯಾಂಕ್ ಠೇವಣಿ, ಪಾಲಿಸಿಗಳು, ಒಂದು ಇನೋವಾ, ಒಂದು ಆಲ್ಟೋ ಕಾರು, ಚಿನ್ನಾಭರಣ, ಒಂದು ವೈನ್ ಸ್ಟೋರ್ ಸೇರಿ 91,98,143 ರೂ., ಸ್ಥಿರಾಸ್ತಿಗಳಲ್ಲಿ ಕೃಷಿ ಭೂಮಿ 12 ಲಕ್ಷ ರೂ. ಮೌಲ್ಯದ್ದು, ಕೃಷಿಯೇತರ ಭೂಮಿ 5 ಕೋಟಿ, 79 ಲಕ್ಷ ರೂ. ಇದ್ದು ಒಟ್ಟು ಬಂಗೇರರಲ್ಲಿ 6,71,28,143 ರೂ. ಮೌಲ್ಯದ ಆಸ್ತಿ, ನಗದು, ಸೊತ್ತುಗಳಿದೆ. ಪತ್ನಿಯ ಹೆಸರಲ್ಲಿ 2,32,00,102 ರೂ. ಮೌಲ್ಯದ ಆಸ್ತಿ, ನಗದು, ಸೊತ್ತುಗಳಿದೆ.
Next Story





