ತುಮಕೂರು ನಗರ, ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ

ತುಮಕೂರು,ಎ.20: ತುಮಕೂರು ನಗರ ಮತ್ತು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಜಿಲ್ಲಾ ಬಿಜೆಪಿ ಅಧ್ಯಕ್ಷ ಜೋತಿ ಗಣೇಶ್ ಮತ್ತು ಶಾಸಕ ಬಿ.ಸುರೇಶ್‍ಗೌಡ ಶುಕ್ರವಾರ ತಮ್ಮ ಸಾವಿರಾರರು ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ನಗರದ ಬಿ.ಹೆಚ್.ರಸ್ತೆಯಲ್ಲಿರುವ ವಿನಾಯಕನಗರದ ಗಣಪತಿ (ಅರ್ಧನಾರೀಶ್ವರ) ದೇವಾಲಯಕ್ಕೆ ಇಬ್ಬರು ಪೂಜೆ ಸಲ್ಲಿಸಿದ ನಂತರ ಟೌನ್‍ಹಾಲ್, ಎಂ.ಜಿ.ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಸಾಗಿ ಮಧ್ಯಾಹ್ನ 12-30ಕ್ಕೆ ಪಕ್ಷ ಸುರೇಶಗೌಡ, ಜಿ.ಪಂ.ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ಗೂಳೂರು ಜಿ.ಪಂ.ಸದಸ್ಯರಾದ ಶಿವಕುಮಾರ್, ರಾಜೇಗೌಡ, ಗ್ರಾಮಾಂತರ ಬ್ಲಾಕ್ ಬಿಜೆಪಿ ಅಧ್ಯಕ್ಷ ಲಕ್ಷ್ಮಿಕಾಂತಯ್ಯ ಅವರೊಂದಿಗೆ ತೆರಳಿ ತಮ್ಮ ಉಮೇದುವಾರಿಕೆ ಪತ್ರ ಸಲ್ಲಿಸಿದರೆ, ಜೋತಿಗಣೇಶ್ ಅವರು ಪಕ್ಷದ ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ಗೋಪಾಲಕೃಷ್ಣೇಗೌಡ, ಮುನಿಯಪ್ಪ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಬಿ.ಸುರೇಶಗೌಡ, ಕ್ಷೇತ್ರವನ್ನು ಇಡೀ ಭಾರತದಲ್ಲಿಯೇ ಮಾದರಿ ಕ್ಷೇತ್ರವನ್ನು ಮಾರ್ಪಡಿಸುವುದು ನನ್ನ ಗುರಿಯಾಗಿದೆ. 2008ರಲ್ಲಿ ಕಂಡು ಬಂದ ಉತ್ಸಾಹವೇ ಈ ಬಾರಿಯೂ ಕಾರ್ಯಕರ್ತರಲ್ಲಿ ಕಂಡು ಬರುತ್ತಿದ್ದು, ಗೆಲುವು ನಿಶ್ಚಿತ. ಇದುವರೆಗೆ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಶಾಲಾ, ಕಾಲೇಜುಗಳ ಅಭಿವೃದ್ದಿ ಸ್ಭೆರಿದಂರೆ ಶೇ60 ರಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಮಾಡಿದ್ದು, ಉಳಿದ 40 ರಷ್ಟು ಕಾಮಗಾರಿಗಳನ್ನು ಪೂರೈಸಲು ಜನರು ನನಗೆ ಇನ್ನೊಂದು ಬಾರಿ ಅವಕಾಶ ನೀಡಬೇಕೆಂಬುದು ನನ್ನ ಬೇಡಿಕೆಯಾಗಿದೆ.
ಪ್ರಮುಖವಾಗಿ ಕ್ಷೇತ್ರದ ಯುವಕರಿಗೆ ಉದ್ಯೋಗ ದೊರೆಯಬೇಕಾಗಿದೆ. ಗ್ರಾಮಾಂತರ ಕ್ಷೇತ್ರಕ್ಕೆ ಸಾಕಷ್ಟು ಕೈಗಾರಿಕೆಗಳನ್ನು ತಂದು ಜನರಿಗೆ ಉದ್ಯೋಗ ನೀಡಬೇಕೆಂಬುದು ನನ್ನ ಆಸೆಯಾಗಿದೆ. ಅದರೆ ಜೊತೆಗೆ ಯುವಜನತೆಯ ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಲು ಸಹ ಕ್ರಮ ಕೈಗೊಳ್ಳುತ್ತೇನೆ. ಕೆ.ಎಸ್.ಸಿ.ಎ ನೇತೃತ್ವದಲ್ಲಿ ತುಮಕೂರು ವಿವಿಯ ಬಿದರೆಕಟ್ಟೆ ಅಥವಾ ವಸಂತನರಸಾಪುರದಲ್ಲಿ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಚಿಂತನೆಯಿದೆ. ಬೆಸ್ಕಾಂ ಕೆಲಸಗಳು ಕೆಲವೊಂದು ಬಾಕಿಯಿದ್ದು, ಅವುಗಳನ್ನು ಪೂರೈಸಲು ಇನ್ನೊಂದು ಅವಧಿಗೆ ಶಾಸಕನಾದರೆ ಸಾಧ್ಯ. ಇದಕ್ಕೆ ಮತದಾರರು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದರು.
ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಅಮಿತಾ ಶಾ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ 30 ರಾಜ್ಯಗಳಲ್ಲಿದ್ದ ಕಾಂಗ್ರೆಸ್ ಆಡಳಿತವನ್ನು ಈಗಾಗಲೇ 22 ರಾಜ್ಯಗಳಲ್ಲಿ ಕಿತ್ತುಕೊಳ್ಳಲಾಗಿದೆ. ಹಾಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಅತಿ ದೊಡ್ಡ ರಾಜ್ಯ ಕರ್ನಾಟಕ. ಇಲ್ಲಿಂದಲೂ ಕಾಂಗ್ರೆಸ್ ತೊಲಗುವ ಕಾಲ ದೂರವಿಲ್ಲವೆಂದರು.
ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೋತಿ ಗಣೇಶ್ ಮಾತನಾಡಿ, ರಾಜ್ಯದಾನಿ ಬೆಂಗಳ್ರರಿಗೆ ಹತ್ತಿರವಿರುವ, ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗಿರುವ ತುಮಕೂರು ನಗರವನ್ನು ಅತ್ಯಂತ ಸುಸಜ್ಜಿತ, ಅತ್ಯಾಧುನಿಕ ನಗರವಾಗಿ ರೂಪಿಸುವುದು ನನ್ನ ಗುರಿ. ಈ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತೇನೆ. ತುಮಕೂರು ನಗರ ಮತದಾರರು, ಜಾತಿ, ಹಣ, ಹೆಚಿಡ, ಬಟ್ಟೆ, ಬರೆಯಂತಹ ಅಮಿಷಗಳಿಗೆ ಬಲಿಯಾಗದೆ ಅಭಿವೃದ್ದಿಗೆ ಪೂರಕವಾದ ಬಿಜೆಪಿ ಪಕ್ಷಕ್ಕೆ ಮತಹಾಕುವಂತೆ ಮನವಿ ಮಾಡಿದರು.
ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು, ನಾಮಪತ್ರ ಸಲ್ಲಿಕೆಯವರೆಗೆ ಆಗಮಿಸಿದ್ದರು.







