Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಶ್ವೇತ ಪೀತ ಕಪೋತ

ಶ್ವೇತ ಪೀತ ಕಪೋತ

ವಾರ್ತಾಭಾರತಿವಾರ್ತಾಭಾರತಿ21 April 2018 12:15 AM IST
share
ಶ್ವೇತ ಪೀತ ಕಪೋತ

ಶ್ವೇತ ಪೀತ ಕಪೋತ ಕೃಷ್ಣ ಗೌರ ಮಾಂಜಿಷ್ಠ

ಕಪಿಲಿ ಕರ್ಬುರ ಅಳಗು ಬೊಟ್ಟಳಗ
ಇಂತೀ ದಶವರ್ಣದ ಪಶುನಾಮದ ಅಸುವನರಿತು
ಸಂಜ್ಞೆ ಗರ್ಜನೆ ತಾಡನೆ ತ್ರಿವಿಧ ಭೇದಂಗಳಿಂದ

ಕಾದೊಪ್ಪಿಸಬೇಕು ಗೋಪಿನಾಥ ವಿಶ್ವೇಶ್ವರಲಿಂಗಕ್ಕೆ.

                                                -ತುರುಗಾಹಿ ರಾಮಣ್ಣ

ವಚನಕಾರರನೇಕರು ತಮ್ಮತಮ್ಮ ಕಾಯಕಗಳಿಂದ ಪಡೆದ ಅನುಭವವನ್ನು ಕಾಯಕದ ಪರಿಭಾಷೆಯಲ್ಲೇ ಅನುಭಾವಕ್ಕೇರಿಸುವ ಕ್ರಮವನ್ನು ಅನುಸರಿಸಿದ್ದಾರೆ. ಶರಣರ ಗೋವುಗಳನ್ನು ಕಾಯುವ ಕಾಯಕದ ಅನುಭವದ ಮೂಲಕವೇ ತುರುಗಾಹಿ ರಾಮಣ್ಣ ಅನುಭಾವದ ದರ್ಶನ ಮಾಡಿಸುತ್ತಾನೆ.

ಬಿಳಿ, ಹಳದಿ, ಕಂದು, ಕಪ್ಪು, ಹೊಂಬಣ್ಣ, ಕೆಂಬಣ್ಣ, ಬೂದು, ಮಿಶ್ರವರ್ಣ, ಹವಳವರ್ಣ ಮತ್ತು ಮೈಮೇಲೆ ಚುಕ್ಕೆಗಳಿರುವ ಹವಳ ವರ್ಣ, ಹೀಗೆ ಹತ್ತು ಬಣ್ಣಗಳ ಪಶುಗಳನ್ನು ಹತೋಟಿಯಲ್ಲಿಡುವುದನ್ನು ತಿಳಿದುಕೊಂಡು ಕೆಲವೊಂದಕ್ಕೆ ಸನ್ನೆಯಿಂದ, ಇತರ ಕೆಲವೊಂದಕ್ಕೆ ಗಟ್ಟಿಯಾಗಿ ಕೂಗಿ, ಮತ್ತೆ ಕೆಲವೊಂದಕ್ಕೆ ತಟ್ಟಿ, ಹೀಗೆ ಮೂರು ಪ್ರಕಾರದಲ್ಲಿ ಕಾಯ್ದು ಗೋಪಿನಾಥ ವಿಶ್ವೇಶ್ವರಲಿಂಗಕ್ಕೆ ಸುರಕ್ಷಿತವಾಗಿ ಒಪ್ಪಿಸುವುದು ತನ್ನ ಕರ್ತವ್ಯವೆಂದು ಹೇಳುತ್ತಾನೆ. ಈ ರೀತಿ ಹೇಳುವ ಮೂಲಕವೇ ತುರುಗಾಹಿ ರಾಮಣ್ಣ ಜೀವಾತ್ಮ - ಪರಮಾತ್ಮ ಸಂಬಂಧವನ್ನು ಕುರಿತು ತಿಳಿಸುತ್ತಾನೆ.
ಆಧ್ಯಾತ್ಮಿಕ ಅರ್ಥದಲ್ಲಿ ಪಶು ಎಂದರೆ ಜೀವಾತ್ಮ, ಪಶುಪತಿ ಎಂದರೆ ಪರಮಾತ್ಮ. ಜೀವಾತ್ಮ- ಪರಮಾತ್ಮ ಸಂಬಂಧಕ್ಕೆ ಅಡ್ಡಿಬರುವಂಥ ವಿವಿಧ ಪ್ರವೃತ್ತಿಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಯಾವರೀತಿಯಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವೋ ಆ ರೀತಿಯಲ್ಲಿ ಸ್ವಾಧೀನಪಡಿಸಿಕೊಳ್ಳಬೇಕು. ಅಂದರೆ ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ ಮುಂತಾದ ಪ್ರವೃತ್ತಿಗಳ ಮೇಲೆ ವಿಜಯ ಸಾಧಿಸುತ್ತ ಜೀವಾತ್ಮನು ಪರಮಾತ್ಮನಲ್ಲಿ ಐಹಿಕ ಜಗತ್ತಿನಲ್ಲೇ ಐಕ್ಯವನ್ನು ಸಾಧಿಸುವುದಕ್ಕಾಗಿ ತಲ್ಲೀನವಾಗಬೇಕೆಂಬುದು ತುರುಗಾಹಿ ರಾಮಣ್ಣನ ಆಶಯವಾಗಿದೆ. ದೈನಂದಿನ ಬದುಕಿನಲ್ಲಿ ‘ಪಶು’ ಎಂಬುದನ್ನು ಆತ ಪ್ರವೃತ್ತಿಗೆ ಹೋಲಿಸುತ್ತಾನೆ. ಆದರೆ ಅನುಭಾವದ ಬದುಕಿನಲ್ಲಿ ಜೀವಾತ್ಮಕ್ಕೆ ಹೋಲಿಸುತ್ತಾನೆ. ಪಶುಪತಿಯ ಪಶುವಾದ ಜೀವಾತ್ಮನು ದೈನಂದಿನ ಬದುಕಿನ ಪ್ರವೃತ್ತಿಗಳೆಂಬ ಪಶುಗಳನ್ನು ಅತ್ತ ಇತ್ತ ಹೋಗದಂತೆ ಹದ್ದುಬಸ್ತಿನಲ್ಲಿಟ್ಟುಕೊಂಡು ಅವುಗಳನ್ನೆಲ್ಲ ಪರಮಾತ್ಮನಿಗೆ ಒಪ್ಪಿಸುವುದು ಎಂದರೆ ಪರಿಶುದ್ಧವಾಗಿ ಬದುಕುವುದು. ಇಂಥ ಪರಿಶುದ್ಧ ಬದುಕೇ ಮಾನವನ ಗುರಿಯಾಗಬೇಕು ಎಂಬುದನ್ನು ತುರುಗಾಹಿ ರಾಮಣ್ಣ ಸೂಚಿಸುತ್ತಾನೆ.
‘ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು ...’ ಎಂದು ಆತ ತನ್ನ ಇನ್ನೊಂದು ವಚನದಲ್ಲಿ ವಿವರಿಸಿದ್ದಾನೆ. ದನಗಾಹಿಯು ಒಂದೇ ಕೋಲಿನಿಂದ ಎಲ್ಲ ತೆರನಾದ ಗೋವುಗಳನ್ನು ತಡೆದು ನಿಲ್ಲಿಸುತ್ತಾನೆ. ಅದೇ ರೀತಿ ಪ್ರತಿಯೊಬ್ಬ ಮನುಷ್ಯ ತನ್ನ ಹಲವು ಹದಿನೆಂಟು ಇಂದ್ರಿಯವಿಕಾರಗಳೆಂಬ ದನಗಳನ್ನು ಏಕಚಿತ್ತವೆಂಬ ಕೋಲಿನಿಂದ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕೆಂದು ತಿಳಿಸುತ್ತಾನೆ.

***

share
ವಾರ್ತಾಭಾರತಿ
ವಾರ್ತಾಭಾರತಿ
Next Story
X