ಕಥುವಾ ಪ್ರಕರಣ: ನಾವುಂದ ಮುಸ್ಲಿಂ ಜಮಾಅತ್ ಧರಣಿ

ಕುಂದಾಪುರ, ಎ.21: ಕಥುವಾ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ನಾವುಂದ ಮುಸ್ಲಿಂ ಜಮಾಅತ್ ಹಾಗೂ ಎಸ್‌ಎಸ್‌ಎಫ್ ವತಿಯಿಂದ ಶುಕ್ರವಾರ ಮಸೀದಿಯ ಆವರಣದಲ್ಲಿ ಧರಣಿ ನಡೆಸಲಾಯಿತು.
ಮಸೀದಿಯ ಖತೀಬ್ ಜಿ.ಕೆ.ಇಕ್ರಾಮುಲ್ಲಾ ಸಖಾಫಿ ಅಲ್-ಖಾಮಿಲ್, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಇಲ್ಯಾಸ್ ಮಾತನಾಡಿ ದರು. ಸಭೆಯಲ್ಲಿ ಮಸೀದಿ ಅಧ್ಯಕ್ಷ ತೌಫಿಕ್ ಅಬ್ದುಲ್ಲಾ ಹಾಜಿ, ಹಾಜಿ ಬಿ.ಎ.ಕೆ. ಸಯ್ಯದ್, ಎಂ.ಎ.ಕೆ. ಹಾಜಿ, ಅಂದುಕಾ ಹಾಜಿ, ತಾಜ್ ಅಬ್ದುಲ್ಲಾ ಹಾಜಿ, ಹುಸೈನ್ ಹಾಜಿ, ಬಿ.ಎಸ್.ಮೊಯ್ದಿನ್, ಕಾರ್ಯಾದರ್ಶಿ ಅಬ್ದುಸ್ಸತ್ತಾರ್, ಜಮಾಅತ್ ಪ್ರಮುಖ ಮನ್ಸೂರ್ ಮರವಂತೆ, ಅಂದುಮಾಯ್ ಕತ್ತಾರ್, ಸುಲೈಮಾನ್, ಅಬ್ದುಲ್ ಹಮೀದ್ ಬಡಾಕೆರೆ, ಅಬ್ದುಲ್ ಖಾದರ್ ಬಡಾಕೆರೆ, ಅಬ್ಬಾಸ್ ಮಾಣಿಕೊಳಲು ಮೊದಲಾದವರು ಉಪಸ್ಥಿತರಿದ್ದರು.
Next Story





