ಉಡುಪಿ: ಮೂರು ದಿನಗಳ ಆನಂದೋತ್ಸವಕ್ಕೆ ಚಾಲನೆ

ಉಡುಪಿ, ಎ.21: ಉಡುಪಿ ರಂಗಭೂಮಿಯ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ ಮೂರು ದಿನಗಳ ದಿ.ಕುತ್ಪಾಡಿ ಆನಂಗ ಗಾಣಿಗರ ಸ್ಮರಣಾರ್ಥ ಆನಂದೋತ್ಸವವನ್ನು ಮೂಡಬಿದ್ರೆ ಆಳ್ವಾಸ್ ಅಧ್ಯಕ್ಷ ಡಾ. ಮೋಹನ್ ಆಳ್ವ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕುತ್ಪಾಡಿ ಆನಂದ ಗಾಣಿಗ ಅವರ ಅಸಹನೆ, ತಲ್ಲಣ, ಚಡಪಡಿಕೆಯ ಹಿಂದಿನ ಕ್ರಿಯಾಶೀಲ ವ್ಯಕ್ತಿತ್ವ ಇಂದಿನ ಯುವ ಕಲಾವಿದರಿಗೆ ಸ್ಫೂರ್ತಿಯಾಗಿದೆ. ಸೌಂದರ್ಯ ಪ್ರಜ್ಞೆ ಇರುವಂತಹ ಹಾಗೂ ವಿಮರ್ಶಕ ಶಕ್ತಿಗಳು ಒಂದಾಗಿ ಸಂಘಟನೆಗಳನ್ನು ರಚಿಸಿ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಬೇಕು ಎಂದರು.
ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್, ಜೊತೆ ಕಾರ್ಯ ದರ್ಶಿಗಳಾದ ರವಿರಾಜ್, ಭಾಸ್ಕರ್ ರಾವ್ ಕಿದಿಯೂರು, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಉಪಾಧ್ಯಕ್ಷ ಪಿ.ವಾಸುದೇವ ರಾವ್, ಎಂ. ನಂದಕುಮಾರ್ ಉಪಸ್ಥಿತರಿದ್ದರು. ಬಳಿಕ ಬೆಂಗಳೂರಿನ ಸಮಷ್ಠಿ ತಂಡದಿಂದ ಚಿತ್ರಪಟ ನಾಟಕ ಪ್ರದರ್ಶನಗೊಂಡಿತು.
Next Story





