ಕೈಕಂಬ: ಕಥುವಾ ಪ್ರಕರಣ ಖಂಡಿಸಿ ಎಸ್ಕೆಸ್ಸೆಸೆಫ್‌ನಿಂದ ಪ್ರತಿಭಟನೆ

ಮಂಗಳೂರು, ಎ.21: ಜಮ್ಮು ಕಾಶ್ಮೀರದ ಕುಥುವಾದ 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ನಡೆಸಿರುವುದನ್ನು ಖಂಡಿಸಿ ಎಸ್ಕೆಸ್ಸೆಸೆಫ್ ಕೈಕಂಬ ವಲಯ ಸಮಿತಿ ವತಿಯಿಂದ ಶುಕ್ರವಾರ ಗುರುಪುರ-ಕೈಕಂಬದ ಮುಖ್ಯ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.
ಈ ವೇಳೆ ಎಸ್ಕೆಸ್ಸೆಸೆಫ್ ದ.ಕ.ಜಿಲ್ಲಾ ಟ್ರೆಂಡ್ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಮಾತನಾಡಿ, ಕಥುವಾದ ಬಾಲಕಿಗೆ ನಡೆದ ಹೀನಾಯ ಘಟನೆಯಿಂದ ವೈಶಿಷ್ಟ, ಪಾವಿತ್ರ್ಯತೆ ಹೊಂದಿರುವ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಥುವಾ ಪ್ರಕರಣದಿಂದ ದೇಶಕ್ಕೆ ಅಪಮಾನವಾಗಿದ್ದು, ಆದ್ದರಿಂದ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಈ ಪ್ರಕರಣವನ್ನು ಸಮರ್ಥಿಸಿ ಫೇಸ್ಬುಕ್‌ನಲ್ಲಿ ಪೋಸ್ಟ್ ಹಾಕಿದ ಕೇರಳ ಮೂಲದ ವಿಷ್ಣು ನಂದಕುಮಾರ್ ಎಂಬಾತನನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಕಾರ್ಯದರ್ಶಿ ಎಂ.ಎ.ಮುಹಮ್ಮದ್ ಕುಂಞಿ, ಕೈಕಂಬ ವಲಯಾಧ್ಯಕ್ಷ ಜಮಾಲುದ್ದೀನ್ ದಾರಿಮಿ, ಕಾರ್ಯದರ್ಶಿ ಆರೀಫ್ ಕಮ್ಮಾಜೆ, ಜಂಇಯ್ಯತುಲ್ ಮುಅಲ್ಲಿಮೀನ್ ಗುರುಪುರ ರೇಂಜ್ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು.







