Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕರಗಡ ಯೋಜನೆಗೆ ಕಾಂಗ್ರೆಸ್ 20 ಕೋ.ರೂ....

ಕರಗಡ ಯೋಜನೆಗೆ ಕಾಂಗ್ರೆಸ್ 20 ಕೋ.ರೂ. ನೀಡಿದ್ದು ನಿಜವಾದರೆ ಸಿ.ಟಿ ರವಿ ರಾಜಕೀಯ ನಿವೃತ್ತಿ: ಎಂ.ಕೆ.ಪ್ರಾಣೇಶ್

ವಾರ್ತಾಭಾರತಿವಾರ್ತಾಭಾರತಿ24 April 2018 10:23 PM IST
share
ಕರಗಡ ಯೋಜನೆಗೆ ಕಾಂಗ್ರೆಸ್ 20 ಕೋ.ರೂ. ನೀಡಿದ್ದು ನಿಜವಾದರೆ ಸಿ.ಟಿ ರವಿ ರಾಜಕೀಯ ನಿವೃತ್ತಿ: ಎಂ.ಕೆ.ಪ್ರಾಣೇಶ್

ಚಿಕ್ಕಮಗಳೂರು, ಎ.24: ಕಳೆದ 15 ವರ್ಷಗಳ ಕಾಲ ಚಿಕ್ಕಮಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕ ಸಿಟಿ ರವಿ ಅವರು ದೂರದೃಷ್ಟಿಯಿಂದಲೆ ಕಾರ್ಯನಿರ್ವಹಿಸಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಈ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲು ಹಾಕಿದರು. ಪ್ರಸಕ್ತ ಈ ಕಾಂಗ್ರೆಸ್ ಮುಖಂಡರು ಚುನಾವಣೆ ಹೊಸ್ತಿಲಲ್ಲಿ ಅಭಿವೃದ್ಧಿಯ ಬಗ್ಗೆ ಕನವರಿಸಲಾರಂಭಿಸಿದ್ದಾರೆಂದು ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಆರೋಪಿಸಿದ್ದಾರೆ.

ಮಂಗಳವಾರದ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಸೇರಿದಂತೆ ಪ್ರತ್ಯೇಕ ಹಾಲಿನ ಡೈರಿ, ಪ್ರವಾಸೋದ್ಯಮ ಅಭಿವೃದ್ಧಿಯಂತಹ ಪ್ರಮುಖ ಯೋಜನೆಗಳ ಜಾರಿಗಾಗಿ ಕಳೆದ 15 ವರ್ಷಗಳಿಂದ ಶಾಸಕ ಸಿಟಿ ರವಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಈ ಯೋಜನೆಗಳು ಇನ್ನೇನು ಜಾರಿಯಾಯಿತು ಎನ್ನುವಷ್ಟರಲ್ಲಿ ಕಾಂಗ್ರೆಸ್ ಪಕ್ಷದವರು ಅಡ್ಡಗಾಲು ಹಾಕಿದರು. ರಾಜ್ಯದಲ್ಲಿ ಕಳೆದ 5 ವರ್ಷ ಕಾಂಗ್ರೆಸ್ ಸರಕಾರ ಇತ್ತು. ಆಗ ಕ್ಷೇತ್ರದ ಬಗ್ಗೆ ಕಾಳಜಿಯೂ ಇಲ್ಲದೆ, ಚಿಕ್ಕಮಗಳೂರು ಎನ್ನುವ ಕ್ಷೇತ್ರವೊಂದಿದೆ ಎನ್ನುವುದೂ ಗೊತ್ತೇ ಇಲ್ಲದಂತೆ ವರ್ತಿಸಿದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಅವರಿಗೆ ಚುನಾವಣೆ ಬಂದ ಕೂಡಲೇ ಇಲ್ಲಿನ ಅಭಿವೃದ್ಧಿ, ಕ್ಷೇತ್ರದ ಜನರ ಮೇಲೆ ಇನ್ನಿಲ್ಲದ ಕನಿಕರ ಉಕ್ಕಿ ಹರಿಯುತ್ತಿದೆ. ಹೋದೆಡೆಯೆಲ್ಲ ಮೊಸಳೆ ಕಣ್ಣೀರು ಸುರಿಸುತ್ತ ಜನರ ಅನುಕಂಪ ಗಿಟ್ಟಿಸಿ ಗೆದ್ದುಬಿಡಬಹು ಎಂದು ಕನಸು ಕಾಣುತ್ತಿದ್ದಾರೆಂದು ಪ್ರಾಣೇಶ್ ಟೀಕಿಸಿದರು.

ಚಿಕ್ಕಮಗಳೂರು ಕ್ಷೇತ್ರದಲ್ಲೂ ಹಲವು ವರ್ಷಗಳಿಂದ ಬರಗಾಲವಿದೆ. ಅದರಲ್ಲೂ ಕಳೆದೆರಡು ವರ್ಷ ಕೆರೆ ಕಟ್ಟೆಗಳೆಲ್ಲವೂ ಬತ್ತಿ ಎರಡು ಬಾರಿ ನೀರಿಗಾಗಿ ಜನರು ಗ್ರಾ.ಪಂ.ಚುನಾವಣೆ ಬಹಿಷ್ಕರಿಸಿದ್ದಾರೆ. ಅಂತಹ ಕಷ್ಟದ ಸಂದರ್ಭದಲ್ಲಿ ಜನರ ಜೊತೆಗಿದ್ದು ನೀರು ಪೂರೈಕೆ ಕ್ರಮ ತೆಗೆದುಕೊಂಡವರು ಶಾಸಕ ಸಿ.ಟಿ.ರವಿ. ಆದರೆ ಆ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಸರಕಾರ, ಅವರದ್ದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿದ್ದರು. ಅವರೇ ನೇಮಿಸಿದ ಅಧಿಕಾರಿಗಳು ಇಲ್ಲಿದ್ದರು. ಆಗೆಲ್ಲ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡದೆ ನಿದ್ರಿಸುತ್ತಿದ್ದವರಿಗೆ ಚುನಾವಣೆ ಬಂದ ಕೂಡಲೇ ಅದರ ಜ್ಞಾಪಕವಾಗಿಬಿಟ್ಟಿದೆ. ಈ ವಿಚಾರದಲ್ಲಿ ಶಾಸಕರು ಸದನದಲ್ಲಿ ಸರಕಾರದ ಗಮನವನ್ನೂ ಸೆಳೆದಿದ್ದಾರೆ. ಕೆರೆ ತುಂಬಿಸುವ ಬೃಹತ್ ಯೋಜನೆಗೆ ಡಿಪಿಆರ್ ತಯಾರಿಸಿ ಸಲ್ಲಿಸಿದ ವರದಿಗೆ ಬಜೆಟ್‍ನಲ್ಲಿ ಬಿಡಿಗಾಸೂ ಇಡದೆ ವಂಚಿಸಿದ್ದು ಇದೇ ಕಾಂಗ್ರೆಸ್ ಸರಕಾರ ಎಂದ ಅವರು, ಶಾಸಕರಿಗಿಂತಲೂ ಹೆಚ್ಚಿನ ಜವಾಬ್ದಾರಿ ಇಲ್ಲಿನ ಉಸ್ತುವಾರಿ ಸಚಿವರಿಗಿತ್ತು, ಆದರೆ ಅವರೇಕೆ ಗಮನಹರಿಸಲಿಲ್ಲ. ಅದಕ್ಕೂ ಸ್ಥಳೀಯ ಕಾಂಗ್ರೆಸಿಗರು ಅಡ್ಡಗಾಲು ಹಾಕಿರಬೇಕೆಂದು ಪ್ರಾಣೇಶ್ ಆರೋಪಿಸಿದರು.

ಚಿಕ್ಕಮಗಳೂರನ್ನು ಸುಸಜ್ಜಿತ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಸಿ.ಟಿ.ರವಿ ಅವರು ಸಚಿವರಾಗಿದ್ದಾಗಲೇ ಹಿರಿಯ ಅಧಿಕಾರಿಗಳನ್ನು ನಗರಕ್ಕೆ ಕರೆಸಿ ಮಾಸ್ಟರ್ ಪ್ಲಾನ್ ರಚಿಸಿದ್ದು ಎಲ್ಲರಿಗೂ ಗೊತ್ತಿದೆ. ನಂತರ ಬಂದ ಕಾಂಗ್ರೆಸ್ ಸರಕಾರ ಅದಕ್ಕೆ ತಿಲಾಂಜಲಿ ಇಟ್ಟಿದೆ. ಇದರ ಬಗ್ಗೆ ಶಂಕರ್ ಗಾಗಲಿ, ಕಾಂಗ್ರೆಸಿಗರಿಗಾಗಲಿ ಪ್ರಶ್ನಿಸಲು ನೈತಿಕತೆ ಇಲ್ಲ. ಜಿಲ್ಲೆಗೆ ಪ್ರತ್ಯೇಕ ಹಾಲಿನ ಡೈರಿ ನಿರ್ಮಿಸಬೇಕು ಎನ್ನುವ ಕುರಿತು ಕಳೆದ 5 ವರ್ಷದಲ್ಲಿ ಎಷ್ಟು ಬಾರಿ ಸರಕಾರದ ಮೇಲೆ ಒತ್ತಡ ತರಲಾಗಿದೆ ಎನ್ನುವುದನ್ನೂ ಬಿ.ಎಲ್.ಶಂಕರ್ ಕಡತಗಳನ್ನು ತೆಗೆಸಿ ನೋಡಲಿ. ಅದಕ್ಕೆ ಮುಖ್ಯಮಂತ್ರಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಏನೇನು ಸಬೂಬುಗಳನ್ನು ಹೇಳಿ ನಮ್ಮ ಕ್ಷೇತ್ರದ ರೈತರನ್ನು ವಂಚಿಸಿದ್ದಾರೆ ಎನ್ನುವುದು ಅವರಿಗೆ ಗೊತ್ತಾಗುತ್ತದೆ.

ರೈತರು ಸಂಕಷ್ಠದಲ್ಲಿ ತೊಳಲಾಡುತ್ತಿದ್ದಾಗ ಮಿನಿ ವಿಮಾನ ನಿಲ್ದಾಣ ಮಾಡುತ್ತೇವೆ ಎಂದು ಜಾಗ ಮಂಜೂರು ಮಾಡಿದ್ದು ಇದೇ ಕಾಂಗ್ರೆಸ್ ಸರಕಾರ. ನಂತರ ಅಲ್ಲಿ ರೈತರು ಶುಂಠಿ ಬೆಳೆದು ಸರಕಾರವನ್ನೇ ಮುಜುಗುರಕ್ಕೀಡು ಮಾಡಿದರು. ಆಗಲೂ ಬಿ.ಎಲ್.ಶಂಕರ್ ಗಾಗಲಿ ಇಲ್ಲಿರುವ ಕಾಂಗ್ರೆಸಿಗರಿಗಾಗಲಿ ಕಿಂಚಿತ್ತೂ ನಾಚಿಕೆ ಆಗಲೇ ಇಲ್ಲ. ಮಾತೆತ್ತಿದರೆ ಕೋಟೆ ಕೆರೆ, ದಂಟರಮಕ್ಕಿ ಕೆರೆ ಅಭಿವೃದ್ಧಿ ಬಗ್ಗೆ ಮಾತನಾಡುವ ಕಾಂಗ್ರೆಸಿಗರಿಗೆ ಈ ಹಿಂದೆ ಅದನ್ನೊಂದು ಕೊಳಚೆಗುಂಡಿಯನ್ನಾಗಿ ಮಾಡಿದ್ದು ಕಾಂಗ್ರೆಸಿಗರೇ ಎನ್ನುವುದು ಗೊತ್ತಿರಲಿ. ಈ ಎರಡೂ ಕೆರೆಗಳಿಗೆ ಹರಿಯುತ್ತಿದ್ದ ಕೊಳಚೆ ನೀರನ್ನು ತಡೆದ ಪರಿಣಾಮ ಕೆರೆ ಇಂದಿಗೂ ಉಳಿದುಕೊಂಡಿದೆ. ಸಹಜವಾಗಿ ಮಳೆ ಇಲ್ಲದ ಕಾರಣ ಬೋಟಿಂಗ್ ಸೇರಿದಂತೆ ಇನ್ನಿತರೆ ಸೌಲತ್ತು ನೀಡಲಾಗುತ್ತಿಲ್ಲ ಎನ್ನುವುದು ನಗರದ ಜನತೆಗೆ ಗೊತ್ತಿದೆ. ದಂಟರಮಕ್ಕಿ ಕರೆಯಲ್ಲಿ ಆಗಿರುವ ನಾಗರಿಕ ಸೌಲಭ್ಯದ ಅಭಿವೃದ್ಧಿಯನ್ನು ಖುದ್ದಾಗಿ ಅಲ್ಲಿಗೆ ಹೋಗಿ ಪರಿಶೀಲಿಸಿದವರಿಗೆ ಮಾತ್ರ ಗೊತ್ತಾಗುತ್ತದೆ ಎಂದರು.

ಬಿಜೆಪಿ ಜಿಲ್ಲಾ ಮಾಧ್ಯಮ ವಕ್ರಾರ ಸಿ.ಎಚ್.ಲೋಕೇಶ್ ಮಾತನಾಡಿ, ಎಂಜಿ ರಸ್ತೆ, ಮಾರ್ಕೆಟ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಬೊಬ್ಬೆ ಹೊಡೆಯುವ ಶಂಕರ್ ಗೆ ಅಲ್ಲಿ ಏನು ಕೆಲಸ ನಡೆದಿದೆ ಎನ್ನುವುದೇ ಗೊತ್ತಿಲ್ಲ. ಯಾರೋ ಹೇಳಿದ್ದನ್ನು ಕೇಳಿಕೊಂಡು ಮಾತನಾಡುವ ಅವರ ಸ್ಥಿತಿ ನಿಜಕ್ಕೂ ಶೋಚನೀಯ. ಕಳೆದ ಬಿಜೆಪಿ ಸರಕಾರದ ಕೊನೆಯ ಅವಧಿಯಲ್ಲಿ ಈ ಎರಡೂ ರಸ್ತೆಗೆ ಅನುದಾನ ಮಂಜೂರು ಮಾಡಿಸಿದ್ದು ಶಾಸಕ ಸಿ.ಟಿ.ರವಿ, ಆದರೆ ಗಾಯತ್ರಿ ಶಾಂತೇಗೌಡರು ಕಾಮಗಾರಿಯನ್ನೇ ಮಾಡಲು ಬಿಡದೆ ಸರಕಾರದ ಮೇಲೆ ಒತ್ತಡ ತಂದು ನಿಲ್ಲಿಸಿದ್ದು ಜನತೆಗೆ ಗೊತ್ತಿದೆ. ಈ ಬಗ್ಗೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಿದ ಮೇಲೆ ಕಾಮಗಾರಿ ಆರಂಭವಾಯಿತು. ಆದರ ನಂತರವೂ ಪದೇ ಪದೇ ಕೆಲಸಕ್ಕೆ ಅಡ್ಡಗಾಲು ಹಾಕಿದ್ದು ಕಾಂಗ್ರೆಸಿಗರೇ, ಎಂಜಿ ರಸ್ತೆಯಲ್ಲಿ ನೆಲದಾಳದಲ್ಲಿ ಕೇಬಲ್ ಅಳವಡಿಸುವ ಕೆಲಸ ಹಾಗೂ ಅದಕ್ಕೆ ವಿದ್ಯುತ್ ಸಂಕಪರ್ಕ ಕೊಡಿಸುವ ಕೆಲಸಕ್ಕೆ ಸರಕಾರ ನಮ್ಮದೆಂಬ ಅಧಿಕಾರ ಬಳಸಿಕೊಂಡ ಕಾಂಗ್ರೆಸಿಗರು ತಡೆಯೊಡ್ಡಿದರು. ಪ್ರತಿಭಟನೆಯ ಎಚ್ಚರಿಕೆ ನೀಡಿ ಕೆಲಸ ಮಾಡಿಸಬೇಕಾಯ್ತು ಇದರಿಂದ ಹಲವು ತಿಂಗಳು ಎಂಜಿ ರಸ್ತೆ ಜನ ತೊಂದರೆ ಪಡಬೇಕಾಯಿತು. ಇಷ್ಟರ ನಡುವೆಯೂ ಗುಣಮಟ್ಟದ ಕೆಲಸ ಮಾಡಿಸಿದ ಹೆಗ್ಗಳಿಕೆ ಶಾಸಕರದ್ದು. ಈ ಎಲ್ಲ ವಿಚಾರಗಳೇ ಗೊತ್ತಿಲ್ಲದ ಶಂಕರ್ ಬಾಯಿಗೆ ಬಂದಂತೆ ಮಾತನಾಡುತ್ತ ಹೋಗುತ್ತಿದ್ದಾರೆಂದು ಆರೋಪಿಸಿದರು.

ಬಿ.ಎಲ್.ಶಂಕರ್ ವೈಟ್ ಕಾಲರ್ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ಅದನ್ನು ಈ ಕ್ಷೇತ್ರದ ಮಟ್ಟಿಗೆ ಸುಳ್ಳುಮಾಡುವ ಅವರ ಪ್ರಯತ್ನ ಫಲಿಸುವುದಿಲ್ಲ. ಬಡಜನರ ಕಷ್ಟ ಗೊತ್ತಿಲ್ಲದವರು, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗದವರು, ಬಡವರನ್ನು ಕಂಡರೆ ಮಾರುದ್ದ ದೂರ ನಿಲ್ಲುವವರು ಈಗ ಚುನಾವಣೆ ಕಾರಣಕ್ಕೆ ಎರಡೂ ಕೈಗಳನ್ನು ಅಗಲಿಸಿ ಬಾಚಿ ತಬ್ಬಿಕೊಂಡ ಕೂಡಲೇ ಅವರ ನಿಜವಾದ ನಡವಳಿಕೆ ಬದಲಾಗುವುದಿಲ್ಲ ಎನ್ನುವುದು ಜನರಿಗೆ ಗೊತ್ತಿದೆ ಎಂದು ಲೋಕೇಶ್ ಇದೇ ವೇಳೆ ಟೀಕಿಸಿದರು.

ಸಿ.ಟಿ. ರವಿ ರಾಜಕೀಯ ನಿವೃತ್ತಿಯಾಗುತ್ತಾರೆ: ಕರಗಡ ಏತನೀರಾವರಿ ಯೋಜನೆಗೆ 20 ಕೋ ರೂ. ಅನುದಾನ ಕಾಂಗ್ರೆಸ್ ನೀಡಿದೆ ಎಂದು ಸೋಮವಾರ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಎಮ್ಮೆಲ್ಸಿ ಗಾಯತ್ರಿ ಶಾಂತೇಗೌಡ ಹೇಳಿದ್ದಾರೆ. ಕರಗಡ ಯೋಜನೆಯ ಎಷ್ಟೀಮೇಟ್ ಇರುವುದೇ 16 ಕೋ. ರೂ. ಆಗಿದೆ. ಗಾಯತ್ರಿ ಅವರು 20 ಕೋ. ರೂ. ತಂದಿದ್ದು ಯಾವ ಯೋಜನೆಗೆ ಎಂಬುದನ್ನು ಸ್ಪಷ್ಟ ಪಡಿಸಬೇಕು. ಅವರು 20 ಕೋ. ರೂ ಅನುದಾನ ತಂದಿದ್ದು ನಿಜವಾದರೇ ಸಿಟಿ ರವಿ ಅವರು ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ. ಸುಳ್ಳಾದರೆ ಬಿ.ಎಲ್.ಶಂಕರ್ ರಾಜಕೀಯ ನಿವೃತ್ತಿಯಾಗಬೇಕು.
- ಸಿ.ಎಚ್.ಲೋಕೇಶ್, ಬಿಜೆಪಿ ಮುಖಂಡ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X