ಅತ್ತಿಬೆಲೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ದರೋಡೆ
ಆನೇಕಲ್, ಎ.25: ಮನೆಯೊಡೆಯನನ್ನು ಬೆದರಿಸಿ ಕೈಕಾಲು ಕಟ್ಟಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿ ಪರಾರಿಯಾದ ಘಟನೆ ಅತ್ತಿಬೆಲೆ ಎಂಬಲ್ಲಿ ನಡೆದಿದೆ.
ಅತ್ತಿಬೆಲೆ ಪಿಲ್ಲಾರೆಡ್ಡಿ ಮನೆಯಲ್ಲಿ ಈ ದರೋಡೆ ನಡೆದಿದೆ. ಮನೆಗೆ ನುಗ್ಗಿದ 10 ಮಂದಿಯ ತಂಡ ಮನೆಯಲ್ಲಿ ಒಂಟಿಯಾಗಿದ್ದ ಮನೆ ಮಾಲಕ ವೆಂಕಟೇಶ್ ರೆಡ್ಡಿ ಎಂಬವರನ್ನು ಚಾಕು ತೋರಿಸಿ ಬೆದರಿಸಿ ಕೈಕಾಲು ಕಟ್ಟಿ ಹಾಕಿದೆೆ. ಬಳಿಕ ಮನೆಯಲ್ಲಿದ್ದ 4.54 ಲಕ್ಷ ರೂ. ನಗದು, 12 ಗ್ರಾಂನ ಚಿನ್ನದ ಉಂಗುರ, ಒಂದು ರ್ಯಾಡೊ ವಾಚ್ ಅನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಮುಸುಕುಧಾರಿಗಳಾಗಿದ್ದ ದರೋಡೆಕೋರರು ಉರ್ದು, ಅರೆಬರೆ ಕನ್ನಡ ಮಾತನಾಡುತ್ತಿದ್ದರೆನ್ನಲಾಗಿದೆ.
ಮನೆಯವರೆಲ್ಲ ಮದುವೆ ಸಮಾರಂಭವೊಂದಕ್ಕೆ ತೆರಳಿದ್ದರಿಂದ ವೆಂಕಟೇಶ್ ಮನೆಯಲ್ಲಿ ಒಂಟಿಯಾಗಿದ್ದರೆನ್ನಲಾಗಿದೆ. ಘಟನಾ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
Next Story