ಕಲುಬುರಗಿ: ಬಾವಿಗಿಳಿದ ತಂದೆ-ಮಗ ಸಹಿತ ಮೂವರು ಉಸಿರುಗಟ್ಟಿ ಮೃತ್ಯು

ಕಲಬುರಗಿ, ಎ.25: ಬಾವಿ ಸ್ವಚ್ಛಗೊಳಿಸಲು ಇಳಿದ ತಂದೆ-ಮಗನ ಸಹಿತ ಮೂವರು ಉಸಿರುಗಟ್ಟಿ ಮೃತಪಟ್ಟ ಘಟನೆ ಕಲಬುರಗಿ ತಾಲೂಕಿನ ಕವಲಗಾ(ಕೆ) ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿರುವುದು ವರದಿಯಾಗಿದೆ.
ಮೃತರನ್ನು ಚೆನ್ನಣ್ಣ ಚೌಡಪ್ಪ ಚೌಡಪ್ಪಗೋಳ(50), ಅವರ ಪುತ್ರ ಮಲ್ಲಿನಾಥ ಅಲಿಯಾಸ್ ಮಲ್ಲು(20) ಹಾಗೂ ಮೆಹಬೂಬ್ ಎಂದು ಗುರುತಿಸಲಾಗಿದೆ.
ಚೆನ್ನಣ್ಣ ಚೌಡಪ್ಪ ಬಾವಿ ಸ್ವಚ್ಛಗೊಳಿಸಲು ಇಳಿದಿದ್ದರು. ಸುಮಾರು ಹೊತ್ತಾದರೂ ಅವರು ಮೇಲೆ ಬಾರದ ಕಾರಣ ಗಾಬರಿಗೊಂಡ ಅವರ ಪುತ್ರ ಮಲ್ಲಿನಾಥ ಕೂಡಾ ಬಾವಿಗಿಳಿದಿದ್ದಾರೆ. ಅವರಿಬ್ಬರು ಬಾವಿಯಿಂದ ಮೇಲೆ ಬರಲಾಗದ ಒದ್ದಾಡುತ್ತಿದ್ದುದನ್ನು ಗಮನಿಸಿದ ಮೆಹಬೂಬ್ ರಕ್ಷಣೆಗಾಗಿ ಬಾವಿಗಿಳಿದಿದ್ದಾರೆನ್ನಲಾಗಿದೆ. ಈ ಮೂವರು ಕೂಡಾ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದರಿಂದ ಬಾವಿಯನ್ನು ಸ್ವಚ್ಛಗೊಳಿಸಲು ಇಳಿದಾಗ ಈ ದುರಂತ ಸಂಭವಿಸಿದೆ.
Next Story





