ದ.ಕ. ಸಹಿತ 4 ಜಿಲ್ಲೆಗಳ ಕಾಂಗ್ರೆಸ್ ಪ್ರಚಾರ ಸಮಿತಿ ಉಸ್ತುವಾರಿ ವೀಕ್ಷಕರಾಗಿ ಉಮರ್ ಫಾರೂಕ್ ನೇಮಕ

ಬಂಟ್ವಾಳ, ಎ.25: ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಸಮಿತಿಯು ದ.ಕ., ತುಮಕೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾ ಉಸ್ತುವಾರಿ ವೀಕ್ಷಕರಾಗಿ ಉಮರ್ ಫಾರೂಕ್ ಫರಂಗಿಪೇಟೆಯವರನ್ನು ನೇಮಕಗೊಳಿಸಿ ಆದೇಶಿಸಿದೆ.
ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕ ಹಾಗೂ ಜಿಪಂ ಮಾಜಿ ಸದಸ್ಯರಾಗಿರುವ ಉಮರ್ ಫಾರೂಕ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಜವಾಬ್ದಾರಿ ವಹಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





