ಮಹಿಳೆ-ಮಕ್ಕಳ ಮೇಲಿನ ದೌರ್ಜನ್ಯ: ಮಾನವ ಹಕ್ಕುಗಳ ಸಮಿತಿಯಿಂದ ಪ್ರತಿಭಟನೆ
.gif)
ಮಂಗಳೂರು, ಎ.25: ದೇಶಾದ್ಯಂತ ಹೆಚ್ಚುತ್ತಿರುವ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿ ಮಾನವ ಹಕ್ಕುಗಳ ಸಮಿತಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ಬುಧವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಮಾನವ ಹಕ್ಕುಗಳ ಸಮಿತಿ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಅನ್ವರ್ ಉಳ್ಳಾಲ್, ಅಬ್ದುಲ್ ರಹ್ಮಾನ್, ಅಫ್ವಾನ್ ಹುಸೈನ್, ಐ.ಪಿ.ಅಬ್ಬಾಸ್, ಮುಹಮ್ಮದ್ ಶಬೀರ್, ಝುಲ್ಫಿಕರ್, ಸತ್ತಾರ್ ಉಳ್ಳಾಲ್, ರಝಿಯಾ ಇಬ್ರಾಹೀಂ, ರೆಹನಾಝ್ ಮತ್ತಿತರರು ಉಪಸ್ಥಿತರಿದ್ದರು.
Next Story