ಸಾಗರ: ಸ್ನಾನಕ್ಕೆ ತೆರಳಿದ್ದ ಇಬ್ಬರು ಪ್ರವಾಸಿಗರು ನೀರು ಪಾಲು

ಸಾಗರ,ಎ.25: ಸ್ನಾನಕ್ಕೆಂದು ತೆರಳಿದ್ದ ವೇಳೆ ಇಬ್ಬರು ಪ್ರವಾಸಿಗರು ನೀರು ಪಾಲಾದ ಘಟನೆ ಸಿಗಂದೂರು ಲಾಂಚ್ ಬಳಿಯ ನದಿಯಲ್ಲಿ ನಡೆದಿದೆ.
ಮೃತರನ್ನು ಆನೆಕಲ್ ನಿವಾಸಿಗಳಾದ ಕುಮಾರ್(18) ಸಂತೋಷ್(21) ಎಂದು ಗುರುತಿಸಲಾಗಿದ್ದು, ಇವರು ಯಲಹಂಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಒಟ್ಟು ಹನ್ನೆರಡು ಜನ ಸ್ನೇಹಿತರೊಂದಿಗೆ ಸಿಗಂದೂರು ಪ್ರವಾಸಕ್ಕೆ ಬಂದಿದ್ದ ಇವರು ಸಿಗಂದೂರು ಲಾಂಚ್ ಬಳಿಯ ನದಿಗೆ ಸ್ಥಾನಕ್ಕೆ ತೆರಳಿದ್ದರು,ಈ ವೇಳೆ ಇಬ್ಬರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ.
Next Story





