ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದಿಂದ ಬ್ಯಾರಿ ಮಿನಿಕಥೆ ಸ್ಪರ್ಧೆ

ಮಂಗಳೂರು, ಎ.25: ಬ್ಯಾರಿ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗರದ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘವು ಬ್ಯಾರಿ ಮಿನಿ ಕಥೆ ಸ್ಪರ್ಧೆಯನ್ನು ಏರ್ಪಡಿಸಿದೆ.
ಮೊದಲನೆ, ಎರಡನೇ ಮತ್ತು ಮೂರನೆ ಸ್ಥಾನ ಪಡೆದ ಅತ್ಯುತ್ತಮ ಕಥೆಗೆ ನಗದು ಬಹುಮಾನವಿದ್ದು, ಆಯ್ದ ಕಥೆಗಳನ್ನು ಸಂಘವು ಪ್ರಕಟಿಸುತ್ತಿರುವ ‘ಬ್ಯಾರಿ ವಾರ್ತೆ’ ಮಾಸಿಕದಲ್ಲಿ ಪ್ರಕಟಿಸಲಾಗುವುದು.
ಭಾಷಾಂತರದ ಕಥೆಗಳಿಗೆ ಅವಕಾಶವಿರುವುದಿಲ್ಲ. 200 ಶಬ್ದಗಳಿಗೆ ಮೀರದ ಬ್ಯಾರಿ ಭಾಷೆಯಲ್ಲಿ ಬರೆದ ಕಥೆಗಳನ್ನು ಮೇ 20ರೊಳಗಾಗಿ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಬಂಟ್ವಾಳ ಚೇಂಬರ್ಸ್, ಬೈಕಂಪಾಡಿ, ಮಂಗಳೂರು 575011 ಇಮೇಲ್: info@bearyvarthe.com ವಿಳಾಸಕ್ಕೆ ಕಳುಹಿಸಬೇಕು.
ಟೈಪ್ ಮಾಡಿರುವ ಕಥೆಗಳನ್ನು ಮೊ. ಸಂ. 7899671325ಗೆ ವಾಟ್ಸಾಪ್ ಮಾಡಬಹುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
Next Story





