80 ವರ್ಷ ಮೇಲ್ಪಟ್ಟ 5 ಅಭ್ಯರ್ಥಿಗಳಿಂದ ನಾಮಪತ್ರ
ಕಾಗೋಡು ತಿಮ್ಮಪ್ಪ, ಶಾಮನೂರು ಶಿವಶಂಕರಪ್ಪ ಹಿರಿಯ ಅಭ್ಯರ್ಥಿಗಳು

ಬೆಂಗಳೂರು, ಎ.25: ವಿಧಾನಸಭಾ ಚುನಾವಣೆಯಲ್ಲಿ 80ರಿಂದ 90 ವರ್ಷದೊಳಗೆ ಐದು ಮಂದಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್‌ನಿಂದ ಮೂರು ಮಂದಿ, ಬಿಜೆಪಿ ಹಾಗೂ ಜೆಡಿಎಸ್‌ನಿಂದ ತಲಾ ಓರ್ವ ಅಭ್ಯರ್ಥಿ ಸ್ಪರ್ಧಿಸಿದ್ದಾರೆ.
ಶಿವಮೊಗ್ಗದ ಸಾಗರದಿಂದ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ (87) ಅತ್ಯಂತ ಹಿರಿಯ ಅಭ್ಯರ್ಥಿಯಾಗಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ(86) ಎರಡನೆ ಹಿರಿಯ ಅಭ್ಯರ್ಥಿಯಾಗಿದ್ದಾರೆ.
ಯಾದಗಿರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ನ ಡಾ.ಎ.ಬಿ. ಮಾಲಕರೆಡ್ಡಿ (82), ಹಾವೇರಿ ಹಾನಗಲ್ ಕ್ಷೇತ್ರದಿಂದ ಬಿಜೆಪಿಯ ಸಿ.ಎಂ. ಉದಾಸಿ (82), ವಿಜಯಪುರದ ಸಿಂದಗಿ ಕ್ಷೇತ್ರದಿಂದ ಜೆಡಿಎಸ್‌ನ ಮಲ್ಲಪ್ಪ ಚನ್ನವೀರಪ್ಪ ಮನಗೊಳಿ(82) ನಾಮಪತ್ರ ಸಲ್ಲಿಸಿರುವ ಹಿರಿಯ ಅಭ್ಯರ್ಥಿಗಳಾಗಿದ್ದಾರೆ.
Next Story





