ಜಿಸ್ಯಾಟ್-11 ಉಡಾವಣೆ ದಿನಾಂಕ ಮುಂದೂಡಿಕೆ

ಹೊಸದಿಲ್ಲಿ, ಎ 25: ಫ್ರೆಂಚ್ ಗಯಾನಾದ ಕೌರೌನಿಂದ ಉಡಾಯಿಸಲು ನಿರ್ಧರಿಸಲಾಗಿದ್ದ ಭಾರತದ ಅತೀ ತೂಕದ ಸಂವಹನ ಉಪಗ್ರಹ ಜಿಸ್ಯಾಟ್-11 ಉಡಾವಣೆಯನ್ನು ಹೆಚ್ಚುವರಿ ಪರಿಶೀಲನೆಯ ಕಾರಣಕ್ಕೆ ಮುಂದೂಡಲಾಗಿದೆ.
ಸೇನಾ ಅಪ್ಲಿಕೇಶನ್ ಹೊಂದಿದ ಸಂವಹನ ಉಪಗ್ರಹ ಜಿಸ್ಯಾಟ್-6ಎ ವಾರಗಳ ಹಿಂದೆ ಸಂಪರ್ಕ ಕಳೆದುಕೊಂಡ ಬಳಿಕ ಇಸ್ರೋ ಈ ನಿರ್ಣಯ ತೆಗೆದುಕೊಂಡಿದೆ. ಜಿಸ್ಯಾಟ್-11 ಅನ್ನು 2018 ಮೇಯಲ್ಲಿ ಫ್ರೆಂಚ್ ಗಯಾನಾದ ಕೌರೌನಿಂದ ಉಡಾಯಿಸಲು ಸಮಯ ನಿಗದಿ ಮಾಡಲಾಗಿತ್ತು. ಪರಿಷ್ಕೃತ ಉಡಾವಣಾ ಸಮಯವನ್ನು ತರುವಾಯ ತಿಳಿಸಲಾಗುವುದು ಎಂದು ಇಸ್ರೋದ ಹೇಳಿಕೆ ತಿಳಿಸಿದೆ. ಜಿಸ್ಯಾಟ್-11ರ ಉಡಾವಣೆಯನ್ನು ಸಮಯ ಮರು ನಿಗದಿ ಮಾಡಿರುವುದಕ್ಕೆ ಇಸ್ರೋ ಯಾವುದೇ ಕಾರಣ ನೀಡಿಲ್ಲ.
Next Story





