ಹನೂರು: ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಹನೂರು,ಎ.25: ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಶಾಸಕ ನರೇಂದ್ರರ ಸಮ್ಮುಖದಲ್ಲಿ ಹಲವರು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶಾಸಕರ ಸಮ್ಮುಖದಲ್ಲಿ ಹನೂರು ಪಟ್ಟಣದ ಅಂಬೇಡ್ಕರ್ ನಗರದ ಯಾಜನಮಾನರುಗಳಾದ ಸಿದ್ದರಾಜು ಸೇರಿದಂತೆ ಮಾದೇವ, ಕೃಷ್ಣ ದುಂಡಯ್ಯ ಮಾತ್ರವಲ್ಲದೇ, ಕ್ಷೇತ್ರ ವ್ಯಾಪ್ತಿಯ ಬೈಲೂರು, ಹೂಸಪಾಳ್ಯ, ಹುಣಸೇಪಾಳ್ಯ, ಕರಿಯಪ್ಪನದೊಡ್ಡಿ, ವಿ.ಎಸ್ ದೂಡ್ಡಿ ,ಬಿ.ಜಿ ದೂಡ್ಡಿ ಗ್ರಾಮಗಳಲ್ಲಿ ಮತಯಾಚನೆ ಸಂದರ್ಭದಲ್ಲಿ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಮಾತನಾಡಿದ ಶಾಸಕರು, ಚುನಾವಣೆ ಹೊಸ್ತಿಲಲ್ಲಿ ಬೇರೆ ಬೇರೆ ಪಕ್ಷದ ಹಲವಾರು ಮುಖಂಡರು ಕಾಂಗ್ರೆಸ್ ಸರ್ಕಾರದ ಅಭಿವೃದ್ದಿಗಳನ್ನು ಮನಗಂಡು ಕಾಂಗ್ರೆಸ್ ಪಕ್ಷದ ಕಡೆ ಆಗಮಿಸುತ್ತಿದ್ದಾರೆ. ಇದು ಸಂತೋಷಕರ ಸಂಗತಿಯಾಗಿದೆ. ಈ ಭಾರಿಯ ಚುನಾವಣೆಯಲ್ಲಿ ನನನ್ನು ಅತ್ಯಧಿಕ ಮತಗಳ ಅಂತರಗಳಿಂದ ಗೆಲ್ಲಿಸುವುದರ ಮುಖಾಂತರ ಹನೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಮತ್ತೋಮ್ಮೆ ಸಾಬೀತುಪಡಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ ಪಂ ಸದಸ್ಯ ಮರಗದಮಣಿ, ಮುಖಂಡರಾದ ಕೋಪ್ಪಾಳಿಮಹದೇವನಾಯಕ್, ರಾಧಮಣಿ, ರವಿಕುಮಾರ್, ಷಣ್ಮುಖ , ಮಹದೇವ್ , ನಾಗರಾಜು, ಸಿದ್ದರಾಜು , ಚೆಲುವರಾಜು ಇನ್ನಿತರರು ಹಾಜರಿದ್ದರು







