ಯುವಶಕ್ತಿ ಬಿಜೆಪಿ ಪರ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ: ಸಿ.ಟಿ.ರವಿ

ಚಿಕ್ಕಮಗಳೂರು, ಎ.25: ರಾಜ್ಯಾದ್ಯಂತ ಯುವಶಕ್ತಿಯು ಬಿಜೆಪಿ ಪಕ್ಷಕ್ಕೆ ಸ್ವಯಂಪ್ರೇರಿತವಾಗಿ ಸೇರುವುದರ ಜೋತೆಗೆ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಬುಧವಾರ ಸಿ.ಟಿ.ರವಿಯವರ ಗೃಹ ಕಚೇರಿಯಲ್ಲಿ ವಿಜಯಪುರದ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಶಂಕರ್ ಸಿಂಗ್, ಪ್ರಕಾಶ್‍ಸಿಂಗ್, ಟೋನಿ, ರೋನಿ, ನೂರಾರು ಕಾರ್ಯಕರ್ತರನ್ನು ಬಿ.ರಾಜಪ್ಪ ನೇತೃತ್ವದಲ್ಲಿ ಶಾಸಕ ಸಿ.ಟಿ.ರವಿ ಪಕ್ಷದ ಬಾವುಟ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಳಿಸಿಕೊಂಡು ಮಾತನಾಡಿ ದೇಶದ ಅಭಿವೃದ್ಧಿಗಾಗಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಸೇರಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಜಾತಿ ಮತ್ತು ಸಮುದಾಯಗಳನ್ನು ಒಡೆದು ಜಾತಿ ರಾಜಕಾರಣ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ವೈಷಮ್ಯ ಹುಟ್ಟು ಹಾಕುವ ಕಾರ್ಯಮಾಡುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಶಂಕರ್ ಸಿಂಗ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಾಗಿ ಕೆಲಸ ಮಾಡಲಾಯಿತು. ಅಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಗೌರವ ನೀಡದಿರುವುದರಿಂದ ಬೇಸತ್ತು ಬಿಜೆಪಿಯ ತತ್ವ ಸಿದ್ದಾಂತಗಳನ್ನು ಒಪ್ಪಿ ಸೇರ್ಪಡೆಗೊಂಡಿದ್ದೇವೆ. ಶಾಸಕರು ತೋರಿದ ಪ್ರೀತಿ ವಿಶ್ವಾಸ ಮತ್ತು ಅಭಿವೃದ್ಧಿ ರಾಜಕಾರಣ ಮೆಚ್ಚಿ ಯುವಕರೆಲ್ಲ ಬಿಜೆಪಿ ಸೇರ್ಪಡೆ ಗೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪತಾಂಜಲಿ ಯೋಗ ಮುಖ್ಯಸ್ಥರಾದ ಗೀತಾ ಪ್ರಕಾಶ್, ನಗರ ಪ್ರದಾನ ಕಾರ್ಯದರ್ಶಿ ಪುಷ್ವ ರಾಜೇಂದ್ರ, ಬಿಜೆಪಿ ಮುಖಂಡರುಗಳಾದ ಕಾಂಚನ್, ಕಾಮತ್, ಕುಮಾರ್, ಅನಿಲ್, ಡಿ.ಕೆ.ಕೃಷ್ಣಮೂರ್ತಿ, ನಗರಸಭೆ ಸದಸ್ಯ ರವಿಕುಮಾರ್ ಉಪಸ್ಥಿತರಿದ್ದರು.







