ಹೊಸ್ಮಾರಿನಲ್ಲಿ ಉಚಿತ ಸಾಮೂಹಿಕ ಮುಂಜಿ ಕರ್ಮ

ಕಾರ್ಕಳ, ಎ.25: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್‍ನ ಹೊಸ್ಮಾರು ಶಾಖೆಯ ವತಿಯಿಂದ ಹೊಸ್ಮಾರು ಶೈಖ್ ಮುಹಿಯುದ್ದೀನ್ ಜುಮಾ ಮಸೀದಿಯ ಆವರಣದಲ್ಲಿ ಸಾಮೂಹಿಕ ಉಚಿತ ಮುಂಜಿಕರ್ಮ ಕಾರ್ಯಕ್ರಮ ಬುಧವಾರ ನಡೆಯಿತು.
ಎಸ್ಸೆಸ್ಸೆಫ್ ಹೊಸ್ಮಾರು ಶಾಖೆಯ ಅಧ್ಯಕ್ಷ ಮೌಲಾನಾ ಮುಹಮ್ಮದ್ ಶರೀಫ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಹೊಸ್ಮಾರು ಶೈಖ್ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಮೌಲಾನಾ ಉಮರ್ ಸಅದಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹೊಸ್ಮಾರು ಶೈಖ್ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಎಂ.ಎಚ್. ಸುಲೈಮಾನ್ ಸಅದಿ ಅಲ್‍ಅಫ್ಲಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಂಜಿಕರ್ಮ ನೆರವೇರಿಸಿದ ಕಾರ್ಕಳ ಸರಕಾರಿ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿ ಡಾ.ರಹ್ಮತುಲ್ಲಾರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಹೊಸ್ಮಾರು ದಾರುಸ್ಸಲಾಮ್ ಸುನ್ನಿ ಮದ್ರಸದ ಮುಖ್ಯ ಅಧ್ಯಾಪಕ ಮೌಲಾನಾ ಮುಸ್ತಫಾ ಅಮಾನಿ, ಈದು ಗ್ರಾಪಂ ಸದಸ್ಯ - ಶೈಖ್ ಮುಹಿಯದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಗುಂಪಕಲ್ಲು, ಎಸ್‍ವೈಎಸ್ ಅಧ್ಯಕ್ಷ ಎನ್.ಸಿ. ಅಹ್ಮದ್ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಕಾರ್ಕಳ ಡಿವಿಶನ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







