ಟೊಮೆಟೊ ಸೇವನೆಯ ಆರೋಗ್ಯಲಾಭಗಳು ಗೊತ್ತೇ...?
ಸೋಲನಮ್ ಲೈಕೊಪರ್ಸಿಕಮ್. ಏನೋ ವಿಚಿತ್ರ ಹೆಸರು ಎಂದು ಅನ್ನಿಸುತ್ತಿದೆಯೇ? ಇದು ನಮ್ಮ ಅಡುಗೆಮನೆಗಳ ಕಾಯಂ ಸದಸ್ಯ ಆಗಿರುವ ಬಡಪಾಯಿ ಟೊಮೆಟೊದ ವೈಜ್ಞಾನಿಕ ಹೆಸರು ಅಷ್ಟೇ...
ಅಂದ ಹಾಗೆ ಹೆಚ್ಚಿನವರು ಭಾವಿಸಿರುವಂತೆ ಟೊಮೆಟೊ ತರಕಾರಿಯಲ್ಲ,ಸಸ್ಯಶಾಸ್ತ್ರೀಯವಾಗಿ ಅದೊಂದು ಹಣ್ಣು. ನಿಖರವಾಗಿ ಹೇಳಬೇಕಿದ್ದರೆ ಬೆರಿ ವರ್ಗಕ್ಕೆ ಸೇರಿದ ಹಣ್ಣು.
ಟೊಮೆಟೊದಲ್ಲಿ ಶೇ.95ರಷ್ಟು ಭಾಗ ನೀರು ಇರುತ್ತದೆ.ಬೇಸಿಗೆಯಲ್ಲಿ ಧಗೆಯಿಂದ ನೆಮ್ಮದಿ ಪಡೆಯಲು ಇದರಷ್ಟು ಉತ್ತಮ ಮತ್ತು ಆರೋಗ್ಯಕರವಾದುದು ಇನ್ನೊಂದಿಲ್ಲ. ಟೊಮೆಟೊ ಮತ್ತು ಒಂದಿಷ್ಟು ಮುಳ್ಳುಸೌತೆ ತುಂಡುಗಳನ್ನು ಜ್ಯೂಸರ್ನಲ್ಲಿ ತಿರುಗಿಸಿಬಿಟ್ಟರೆ ಸಿಗುವ ರಸ ಬೇಸಿಗೆಗೊಂದು ಅದ್ಭುತ ಪಾನೀಯವಾಗುತ್ತದೆ. ಟೊಮೆಟೊದ ಉಳಿದ ಶೇ.5ರಷ್ಟುಭಾಗ ಕಾರ್ಬೊಹೈಡ್ರೇಟ್ಗಳು,ಪ್ರೋಟಿನ್ ಮತ್ತು ಕೊಬ್ಬನ್ನು ಒಳಗೊಂಡಿರುತ್ತದೆ. ಟೊಮೆಟೊ ಫಾಲೇಟ್, ಪೊಟ್ಯಾಷಿಯಂ,ವಿಟಾಮಿನ್ ಕೆ ಮತ್ತು ಸಿ ಇತ್ಯಾದಿಗಳಂತಹ ಖನಿಜಗಳು ಮತ್ತು ವಿಟಾಮಿನ್ಗಳ ಸಮೃದ್ಧ ಮೂಲವೂ ಆಗಿದೆ.
ಟೊಮೆಟೊದ್ಲ್ಲ್ಟಿರುವ ಇತರ ಸಂಯುಕ್ತಗಳನ್ನು ನೋಡೋಣ. ಕ್ಲೋರೊಜೆನಿಕ ಆಮ್ಲವು ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ.ನಾರ್ಸಿಜಿನಿನ್ ಉರಿಯೂತವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಬೀಟಾ-ಕ್ಯಾರೊಟಿನ್ ಶರೀರದಲ್ಲಿ ವಿಟಾಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ.
ಇಂತಹ ಟೊಮೆಟೊ ನಮ್ಮ ಶರೀರಕ್ಕೆ ನೀಡುವ ಆರೋಗ್ಯಲಾಭಗಳ ಮಾಹಿತಿಯಿಲ್ಲಿದೆ...
► ಅದು ಕ್ಯಾನ್ಸರ್ ನಿರೋಧಕ
ಟೊಮೆಟೊ ಕೆಂಪಗಿದ್ದಷ್ಟೂ ಅದರಲ್ಲಿ ಲೈಕೊಪೀನ್ ಸಮೃದ್ಧವಾಗಿರುತ್ತದೆ. ಇದು ವಿಶೇಷವಾಗಿ ಕರುಳು,ಸ್ತನಗಳು ಮತ್ತು ಶ್ವಾಸಕೋಶಗಳಲ್ಲಿ ಕ್ಯಾನ್ಸರ್ ಕೋಶಗಳಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಟೊಮೆಟೊದಲ್ಲಿರುವ ಉತ್ಕರ್ಷ್ಣ ನಿರೋಧಕಗಳು ಸಹ ಇದಕೆ ಪೂರಕವಾಗವೆ.
► ಹೃದಯದ ಆರೋಗ್ಯ ಹೆಚ್ಚಿಸುತ್ತದೆ
ಟೊಮೆಟೊದಲ್ಲಿರುವ ಬೀಜಗಳಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ,ಬದಲಿಗೆ ಅದು ನಾರುಗಳನ್ನು ಹೊಂದಿದ್ದು,ಇವು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತವೆ. ಅದರಲ್ಲಿರುವ ಪೊಟ್ಯಾಷಿಯಂ ಕೂಡ ಹೃದ್ರೋಗಗಳನ್ನು ತಡೆಯಲು ಸಹಾಯಕವಾಗಿದೆ.
► ಹೆಚ್ಚಿನ ರಕ್ತದೊತ್ತಡವನ್ನು ತಗ್ಗಿಸುತ್ತದೆ
ಟೊಮೆಟೊದಲ್ಲಿರುವ ಲೈಕೊಪೀನ್ ಮತ್ತು ಕ್ಲೋರೊಜೆನಿಕ್ ಆ್ಯಸಿಡ್ ರಕ್ತದೊತ್ತಡ ಮಟ್ಟವನ್ನು ತಗ್ಗಿಸುತ್ತವೆ,ತನ್ಮೂಲಕ ಅಧಿಕ ರಕ್ತದೊತ್ತಡದ ವಿರುದ್ಧ ರಕ್ಷಣೆಯನ್ನು ನೀಡುತ್ತವೆ.
► ಉತ್ಕರ್ಷಣ ನಿರೋಧಕ ಗುಣ
ಶರೀರದಲ್ಲಿ ಫ್ರೀರ್ಯಾಡಿಕಲ್ಗಳ ಉತ್ಪತ್ತಿ ಉರಿಯೂತವನ್ನುಂಟು ಮಾಡುತ್ತದೆ. ಉರಿಯೂತವು ಮುಂದುವರಿದರೆ ಅದು ಅಥೆರೊಸೆಲೆರೊಸಿಸ್,ಆಸ್ಟಿಯೊಪೊರೊಸಿಸ್ಅಲ್ಝೀಮರ್ ಮತ್ತುಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹದು. ಟೊಮೆಟೊದಲ್ಲರುವ ಲೈಕೊಪೀನ್ ಮತ್ತು ಬೀಟಾ-ಕ್ಯಾರೊಟಿನ್ ಫ್ರೀ ರ್ಯಾಡೊಇಕಲ್ಗಳನ್ನು ನಿವಾರಿಸುವ ಮೂಲಕ ಕಾಯಿಲೆಗಳ ವಿರುದ್ಧ ರಜ್ಷಣೆ ನೀಡುತ್ತವೆ.
► ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ
ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹೃದ್ರೋಗಗಳಳಿಗೆ ಪ್ರೆಮುಖ ಕಾರಣವಾಗಿದೆ. ಟೊಮೆಟೊ ರಕ್ತ ಹೆಪ್ಪುಗಟ್ಟವುದನ್ನು ತಡೆಯುತ್ತದೆ. ಟೊಮೊಟೊದ ಬೀಜಗಳು ಫ್ರುಟ್ಲೋ ಎಂದು ಕರೆಯಲಾಗುವ ದಪಪ ಲೋಳೆಯಿಂದ ಸುತ್ತುವರಿದಿರುತ್ತವೆ. ಈ ಫ್ರುಟ್ಲೋ ಮತ್ತು ಲೈಕೊಪೀನ್ ಸೇರಿಕೊಂಡು ರಕ್ತ ಹೆಪ್ಪುಗಟ್ಟಿ ಉಂಮಟಾಗಿರುವ ತಡೆಯನ್ನು ನಿವಾರಿಸುತ್ತವೆ.
► ಜೀರ್ಣಕ್ರಿಯೆಗೆ ಸಹಕಾರಿ
ಟೊಮೆಟೊದಲ್ಲಿರುವ ನಾರು ಜೀರ್ಣಾಂಗದ ಸ್ನಾಯುಗಳ ಚಲನವಲನಗಳನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ತನ್ಮೂಲಕ ಹೆಣ್ಣು ಜೀರ್ಣ ರಸಗಳು ಬಿಡುಗಡೆಗೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಜೀರ್ಣಕ್ರಿಯೆಯು ಸರಿಯಾಗಿ ನಡೆಯುತ್ತದೆ ಮತ್ತು ಅತಿಸಾರ ಅಥವಾ ಮಲಬದ್ಧತೆಯ ಸಮಸ್ಯೆಗಳಿರುವುದಿಲ್ಲ.
► ಚರ್ಮಕ್ಕೆ ಉಪಕಾರಿ
ಟೊಮೆಟೊವನ್ನು ತಿಂದರೂ,ಹಾಗೆಯೇ ಲೇಪಸಿಕೊಂಡರೂ ಅದು ಚರ್ಮಕ್ಕೆ ಅತ್ಯುತ್ತಮವಾಗಿದೆ. ಚರ್ಮಕ್ಕೆ ಉಜ್ಜಿಕೊಂಡರೆ ಅದನ್ನು ಮೃದುವಾಗಿಸುವ ಜೊತೆಗೆ ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ,ಸನ್ಬರ್ನನ ದುಷ್ಪಪರಿಣಾಮಗಳನ್ನು ನಿವಾರಿಸಲು ಟೊಮೆಟೊವನ್ನು ಮೊಸರಿಮನೊಂದಿಗೆ ಬೆರೆಸಿ ಪೀಡಿತ ಭಾಗದಲ್ಲಿ ಲೇಪಿಸಿಕೊಳ್ಳಬಹುದು. ಅದು ಚರ್ಮಕ್ಕೆ ತಂಪು ನೀಡುವ ಕೊತೆಗೆ ಅದನ್ನು ಹೊಲೆಯುವಂಂತೆಯೂ ಮಾಡುತ್ತದೆ. ಟೊಮೆಟೊ ವಯಸ್ಸಾಗುವದನ್ನು ವಿಳಂಬಿಸುತ್ತದೆ. ಅದು ನಾವು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳಲು ನೆರವಾಗುವ ಮೂಲಕ ಚರ್ಮವನ್ನು ತಾಜಾ ಆಗಿರಿಸುತ್ತದೆ.
► ತಲೆಗೂದಲಿಗೂ ಒಳ್ಳೆಯದು
ತಲೆ ತುರಿಸುತ್ತಿದ್ದರೆ,ಹೊಟ್ಟು ತುಂಬಿದ್ದರೆ,ಕಜ್ಜಿಗಳಾಗಿದ್ದರೆ ಟೊಮೆಟೊ ಅತ್ಯುತ್ತಮ ಪರಿಹಾರವಾಗಿದೆ. ಅದರಲ್ಲಿಯ ವಿಟಾಮಿನ್ ಸಿ ಹೊಟ್ಟು ಉಂಟಾಗುವುದರ ವಿರರುದ್ಧ ಹೋರಾಡುತ್ತದೆ. ಟಮೆಟೊ ತಲೆಬುರುಡೆಯ ಜೀವಕೋಶಗಳಸಹಜ ಬೆಳವಣಿಗೆಯನ್ನಜು ಉತ್ತೇಜಿಸುತ್ತದೆ.3-4 ಚಮಚ ಲಿಣೆರಸವನನ್ನು ಚೆನ್ನಾಗಿ ಹಣ್ಣಾದ 2-3 ಟೊಮೆಟೊಗಳಿಗೆ ಸೇರಿಸಿ ಪೇಸ್ಟ್ ತಯಾರಿಸಿ ಅದನ್ನು ತಲೆಬುರುಡೆಗೆ ಹಚ್ಚಿಕೊಂಡರೆ ತಲೆಗೂದಲಿಗೆ ಹೊಳಪು ನೀಡುವ ಜೊತೆಗೆ ತಲೆಬುರುಡೆನ್ನು ಆರೋಗ್ಯಯುತವಾಗಿರಿಸುತ್ತದೆ.
► ದೃಷ್ಟಿಯನ್ನು ಸುಧರಿಸುತ್ತದೆ
ಟೊಮೆಟೊದಲ್ಲಿ ಸಮೃದ್ಧವವವಾಗಿರುವ ಬಿಟಾ-ಕ್ಯರೊಟಿನ್ ಒದಗಿಸುವ ವಿಟಾಮಿನ್ ಎ ಕಣ್ಣಿನ ಕಾಯಿಲೆಗಳನ್ನು ಗುಣಪಡಿಸುತ್ತದೆ.ಅದರಲ್ಲಿರುವ ಉತ್ಕರ್ಷಣ ನಿರೋಧಕ ಗುಣವು ಫ್ರೀ ರ್ಯಾಡಿಕಲ್ಗಳನ್ನು ನಿವಾರಿಸಿದೃಷ್ಟಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯನ್ನು ತಗ್ಗಿಸುತ್ತದೆ.
► ತೂಕ ಇಳಿಕೆಗೂಸಹಕಾರಿ
ನೀವು ಶರೀರದ ತೂಕ ಇಳಿಸಿಕೊಳ್ಳಲು ಬಯಸಿದ್ದರೆ ನಿಮ್ಮ ಆಹಾರದಲಲ್ಲಿ ಟೊಮೆಟೊ ಸೇರಿಸಿಕೊಳ್ಳಿ. ಅದು ಶೇ.95ರಷ್ಟು ನೀರನ್ನು ಹೊಂದಿದ್ದು,ಕ್ಯಾಲೊರಿಗಳೂ ಕಡಿಮೆ ಪ್ರಮಾಣದಲ್ಲಿವೆ. ಶೇ.ಒ.1ಕ್ಕಿಂತ ಕಡಿಮೆ ಸಕ್ಕರೆಯನ್ನು ಹೊಂದಿರುವುದರಿಮದ ಟೊಮೆಟೊ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನೂ ನಿಯಂತ್ರಣದಲ್ಲಿರಿಸಲೂ ನೆರವಾಗುತ್ತದೆ.