ಪುತ್ತೂರು: ಚುನಾವಣಾ ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳು

ಪುತ್ತೂರ, ಎ.27: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಮುಖಂಡ ಅಶ್ರಫ್ ಕಲ್ಲೇಗ ತನ್ನ ನಾಮಪತ್ರ ಹಿಂಪಡೆದಿದ್ದಾರೆ. ಶುಕ್ರವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿತ್ತು.
ಕಣದಲ್ಲಿರುವ ಅಭ್ಯರ್ಥಿಗಳು:
ಕಾಂಗ್ರೆಸ್ ಅ್ಯರ್ಥಿ, ಹಾಲಿ ಶಾಸಕಿ ಶಕುಂತಳಾ ಶೆಟ್ಟಿ, ಬಿಜೆಪಿಯ ಸಂಜೀವ ಮಠಂದೂರು, ಜೆಡಿಎಸ್‌ನ ಐ.ಸಿ.ಕೈಲಾಸ್, ಸ್ವತಂತ್ರ ತುಳುನಾಡ್ ಪಕ್ಷದ ವಿದ್ಯಾಶ್ರೀ, ಪ್ರಜಾ ಪರಿವರ್ತನಾ ಪಕ್ಷದ ಶೇಖರ್ ಮಾಡಾವು, ಸಂಯುಕ್ತ ಜನತಾದಳದ ಮಜೀದ್ ಎನ್.ಕೆ. ಕೋಲ್ಪೆ, ಮಹಿಳಾ ಎಂಪವರ್ ಪಾರ್ಟಿಯ ಶಬನಾ ಎಸ್. ಶೇಖ್, ಸಾಮಾನ್ಯ ಜನತಾ ಪಕ್ಷದ ಎಂ.ಎಸ್.ರಾವ್ ಬೀರಮಲೆ, ಪಕ್ಷೇತರ ಅಭ್ಯರ್ಥಿಗಳಾದ ಅಮರನಾಥ ಬಿ.ಕೆ., ಚೇತನ ಭರತಪುರ ಮತ್ತು ಬಶೀರ್ ಬೂಡಿಯಾರ್ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
Next Story





