ನಚ್ಚಬೊಟ್ಟು ದಾರುಲ್ ಮುಸ್ತಫಾ: ಬುರ್ದಾ ಮಜ್ಲಿಸ್ ಹಾಗೂ ಆಧ್ಯಾತ್ಮಿಕ ಸಂಗಮ
ಇಸ್ತಿಫಾ ಸಾಹಿತ್ಯ ವೇದಿಕೆಯ 18 ನೇ ದರ್ಸ್ ವಾರ್ಷಿಕೋತ್ಸವ

ಉಪ್ಪಿನಂಗಡಿ,ಎ.27: ನಚ್ಚಬೆಟ್ಟು ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿಯ ವಿದ್ಯಾರ್ಥಿ ಸಂಘಟನೆಯಾದ ಇಸ್ತಿಫಾ ಸಾಹಿತ್ಯ ವೇದಿಕೆಯ 18 ನೇ ದರ್ಸ್ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ಬುರ್ದಾ ಮಜ್ಲಿಸ್, ಆಧ್ಯಾತ್ಮಿಕ ಸಂಗಮ ಹಾಗೂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಭಾಂಗಣದ ತಾಜುಲ್ ಉಲಮಾ ವೇದಿಕೆಯಲ್ಲಿ ಎ.26 ರಂದು ಗುರುವಾರ ಮಗ್ರಿಬ್ ನಮಾಜಿನ ಬಳಿಕ ನಡೆಯಿತು.
ಕಾರ್ಯಕ್ರಮದ ಉಧ್ಘಾಟನೆಯನ್ನು ಉಮರ್ ಸಖಾಫಿ ಕಂಬಳಬೆಟ್ಟು ನೆರವೇರಿಸಿದರು. ನಂತರ ಮುನೀರ್ ಸಖಾಫಿ ಸಾಲೆತ್ತೂರು ಹಾಗೂ ಬಶೀರ್ ಅಹ್ಸನಿ ತೋಡಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸುನ್ನೀ ಜಂ-ಇಯ್ಯತುಲ್ ಉಲಮಾದ ಕಾರ್ಯದರ್ಶಿ ಹಾಗೂ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿಯ ಸ್ಥಾಪಕರಾದ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಮುಖ್ಯಪ್ರಭಾಷಣ ಮಾಡಿದರು.
ನಂತರ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ನಡೆಯಿತು. ಈ ವೇಳೆ ಮಾಸ್ಟರ್ ನೂರುಲ್ ಅಮೀನ್ ಕೇರಳ, ಮಾಸ್ಟರ್ ಶಮ್ಮಾಸ್ ಮಂಗಳೂರು, ಮಾಸ್ಟರ್ ಸಲ್ಮಾನ್ ಫಾರೀಸ್ ಉಳ್ಳಾಲ, ಮಾಸ್ಟರ್ ಉವೈಸ್ ಅಮಾನತ್, ಹಾಗೂ ಶುಹೈಬ್ ಜಯನಗರ ನಅತ್ ಆಲಾಪನೆ ಮಾಡಿದರು. ಸಮಾರಂಭದ ನೇತೃತ್ವವನ್ನು ವಹಿಸಿದ್ದ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಲ್ ಕಿಲ್ಲೂರುರವರು ಪ್ರಾಸ್ತಾವಿಕ ಭಾಷಣ ಮಾಡಿ, ಪ್ರಾರ್ಥನೆ ಮಾಡಿದರು. ಈ ವೇಳೆ ಸಂಸ್ಥೆಯಲ್ಲಿ ಕಲಿತು, ಉನ್ನತ ವ್ಯಾಸಂಗಕ್ಕಾಗಿ ತೆರಳುವ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಹಸನ್ ಝುಹ್ರಿ ಮಂಗಳಪೇಟೆ, ಮನ್ಸೂರ್ ಮದನಿ ವಳವೂರು ಸೇರಿದಂತೆ ಸಂಸ್ಥೆಯ ಹಲವು ಪೂರ್ವ ವಿದ್ಯಾರ್ಥಿಗಳು ಹಾಜರಿದ್ದರು. ಮುಸ್ತಫಾ ಹಿಮಮಿ ಗೇರುಕಟ್ಟೆ ಸ್ವಾಗತಿಸಿ, ರಾಶಿದ್ ಮದನಿ ಕಡಬ ವಂದಿಸಿದರು.







