ಉಡುಪಿ ಜಿಲ್ಲೆಯಲ್ಲಿ 34 ಅಭ್ಯರ್ಥಿಗಳು ಕಣದಲ್ಲಿ: ಐವರು ನಾಮಪತ್ರ ವಾಪಸ್

ಉಡುಪಿ, ಎ.27: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಸ್ಪರ್ಧಾಕಣದ ಚಿತ್ರಣ ಸ್ಪಷ್ಟಗೊಂಡಿದ್ದು, ಐದು ಕ್ಷೇತ್ರಗಳಲ್ಲಿ ಒಟ್ಟು 34 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾದ ಶುಕ್ರವಾರ ಒಟ್ಟು ಐವರು ತಮ್ಮ ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. ಉಡುಪಿ ಹಾಗೂ ಕುಂದಾಪುರ ಕ್ಷೇತ್ರಗಳಿಂದ ತಲಾ ಇಬ್ಬರು ಮತ್ತು ಕಾರ್ಕಳದಿಂದ ಒಬ್ಬರು ಇದರಲ್ಲಿ ಸೇರಿದ್ದಾರೆ.
ಹೀಗಾಗಿ ಬೈಂದೂರು ಕ್ಷೇತ್ರದಲ್ಲಿ 9 ಮಂದಿ, ಕುಂದಾಪುರದಲ್ಲಿ ಐವರು, ಉಡುಪಿಯಲ್ಲಿ ಎಂಟು ಮಂದಿ, ಕಾಪುವಿನಲ್ಲಿ ಐವರು ಹಾಗೂ ಕಾರ್ಕಳ ಕ್ಷೇತ್ರದಲ್ಲಿ ಏಳು ಮಂದಿ ಅಂತಿಮವಾಗಿ ಕಣದಲ್ಲಿ ಉಳಿದು ಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರದಿಂದ ರಾಕೇಶ್ ಮಲ್ಯ ಹಾಗೂ ವಿಕಾಸ್ ಹೆಗ್ಡೆ, ಉಡುಪಿಯಿಂದ ಶ್ರೀಲಕ್ಷ್ಮಿವರತೀರ್ಥ ಸ್ವಾಮೀಜಿ ಹಾಗೂ ರಮೇಶ ಮರಕಾಲ ಮತ್ತು ಕಾರ್ಕಳದಿಂದ ಮುಹಮ್ಮದ್ ಶರೀಫ್ ನಾಮಪತ್ರಗಳನ್ನು ಹಿಂಪಡೆದು ಸ್ಪರ್ಧಾ ಕಣದಿಂದ ದೂರ ಸರಿದಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು 43 ಮಂದಿ 88 ನಾಮಪತ್ರಗಳನ್ನು ಸಲ್ಲಿಸಿದ್ದು, ಪರಿಶೀಲನೆಯ ವೇಳೆ ನಾಲ್ವರ ಆರು ನಾಮಪತ್ರಗಳು ತಿರಸ್ಕೃತಗೊಂಡಿದ್ದವು. 39 ಮಂದಿಯ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಇದೀಗ ಐವರು ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ 34 ಮಂದಿ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ.
ಜಿಲ್ಲೆಯ ಪ್ರತಿ ಕ್ಷೇತ್ರದಲ್ಲಿ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದವರ ವಿವರ.
118.ಬೈಂದೂರು: 1.ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್), 2.ಸಿ. ರವೀಂದ್ರ (ಜೆಡಿಎಸ್), 3.ಬಿ.ಎಂ.ಸುಕುಮಾರ್ ಶೆಟ್ಟಿ (ಬಿಜೆಪಿ), 4.ಸುರೇಶ್ ಕಲ್ಲಾಗರ (ಸಿಪಿಐ(ಎಂ)), 5.ಅಬ್ದುಲ್ ಹಜೀದ್ (ಎಂಇಪಿ), 6.ಮಂಜುನಾಥ ಕೆ. (ಪಕ್ಷೇತರ), 7.ಮಂಜುನಾಥ ಬಸವ ಮರಕಾಲ (ಪಕ್ಷೇತರ), 8.ಸುಬ್ರಹ್ಮಣ್ಯ ಬಿ.(ಪಕ್ಷೇತರ), 9.ಎಚ್.ಸುರೇಶ್ ಪೂಜಾರಿ (ಪಕ್ಷೇತರ).
119.ಕುಂದಾಪುರ:1.ತೆಕ್ಕಟ್ಟೆ ಪ್ರಕಾಶ ಶೆಟ್ಟಿ (ಜೆಡಿಎಸ್), 2.ರಾಕೇಶ್ ಮಲ್ಲಿ (ಕಾಂಗ್ರೆಸ್), 3.ಹಾಲಾಡಿ ಶ್ರೀನಿವಾಸ ಶೆಟ್ಟಿ (ಬಿಜೆಪಿ), 4.ರಾಜೀವ್ ಕೋಟ್ಯಾನ್ (ಸಂಯುಕ್ತ ಜನತಾದಳ), 5.ಸುಧಾಕರ ಸೂರ್ಗೊಳಿ (ಎಂಇಪಿ).
120.ಉಡುಪಿ: 1.ಗಂಗಾಧರ ಬಿರ್ತಿ (ಜೆಡಿಎಸ್), 2.ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್), 3.ರಘುಪತಿ ಭಟ್ (ಬಿಜೆಪಿ), 4. ಮಧುಕರ ಮುದ್ರಾಡಿ (ಶಿವಸೇನೆ), 5.ವೈ.ಎಸ್.ವಿಶ್ವನಾಥ (ಎಂಇಪಿ), 6.ಶೇಖರ ಹಾವಂಜೆ (ಭಾರತೀಯ ರಿಪಬ್ಲಿಕನ್ ಪಕ್ಷ), 7.ಮಹೇಶ್ (ಪಕ್ಷೇತರ), 8. ಸುಧೀರ್ ಕಾಂಚನ್ (ಪಕ್ಷೇತರ).
121.ಕಾಪು:1.ಮನ್ಸೂರ್ ಇಬ್ರಾಹೀಂ (ಜೆಡಿಎಸ್), 2.ಲಾಲಾಜಿ ಆರ್. ಮೆಂಡನ್ (ಬಿಜೆಪಿ), 3.ವಿನಯಕುಮಾರ್ ಸೊರಕೆ (ಕಾಂಗ್ರೆಸ್), 4.ಅನುಪಮಾ ಶೆಣೈ (ಭಾರತೀಯ ಜನಶಕ್ತಿ ಕಾಂಗ್ರೆಸ್), 5. ಅಬ್ದುಲ್ ರಹಿಮಾನ್ (ಎಂಇಪಿ).
122.ಕಾರ್ಕಳ: 1.ಉದಯಕುಮಾರ್ (ಬಹುಜನ ಸಮಾಜ ಪಾರ್ಟಿ), 2.ಗೋಪಾಲ ಭಂಡಾರಿ (ಕಾಂಗ್ರೆಸ್), 3.ವಿ.ಸುನೀಲ್ ಕುಮಾರ್ (ಬಿಜೆಪಿ), 4.ಮನ್ಸೂದ್ ಅಹ್ಮದ್ (ಎಂಇಪಿ), 5.ಅಬ್ದುಲ್ ಅಝೀಝ್ (ಪಕ್ಷೇತರ), 6.ಅಶ್ರಫ್ ಅಲಿ (ಪಕ್ಷೇತರ), 7. ಸುಮಂತ ಕೆ. ಪೂಜಾರಿ (ಪಕ್ಷೇತರ).







