ಆನೇಕಲ್: ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

ಆನೇಕಲ್, ಎ.27: ಕೆರೆಗೆ ಸ್ನಾನಕ್ಕಿಳಿದ ಯುವಕನೋರ್ವ ಮುಳುಗಿ ಮೃತಪಟ್ಟ ಘಟನೆ ಆನೇಕಲ್ಗುಡ್ನಹಳ್ಳಿ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಇಲ್ಲಿನ ಆಶ್ರಯ ಯೋಜನೆ ದಿನ್ನೆ ವಾಸಿ ಹರೀಶ್ ಎಂದು ಗುರುತಿಸಲಾಗಿದೆ. ಇವರು ಇಂದು ಮಧ್ಯಾಹ್ನ ಎಂಟು ಮಂದಿ ಗೆಳೆಯರೊಂದಿಗೆ ಗುಡ್ನಹಳ್ಳಿ ಕೆರೆಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟರೆನ್ನಲಾಗಿದೆ.
ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





