ಎ.28 ರಿಂದ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಪಬ್ಲಿಕ್ ಪರೀಕ್ಷೆ
ಚಿಕ್ಕಮಗಳೂರು, ಎ.27: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆಯುತ್ತಿರುವ ಮದ್ರಾಸಗಳಲ್ಲಿ ಎ.28ರಿಂದ ಎರಡನೇ, ಐದನೇ, ಏಳನೇ, ಮತ್ತು 10ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಯಲಿದ್ದು, ಇಂಡೋನೇಷ್ಯ, ಯು.ಎ.ಇ, ಸೌದಿ ಅರೇಬಿಯಾ, ಶ್ರೀಲಂಕಾ, ಖತರ್, ಕುವೈಟ್, ಮಲೇಷ್ಯ ರಾಷ್ಟ್ರಗಳ ಸಹಿತ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಅಂದ್ರಪ್ರದೇಶ ಮುಂತಾದ ಹಲವು ರಾಜ್ಯಗಳಲ್ಲಿ ಏಕ ಸಮಯದಲ್ಲಿ ಪರೀಕ್ಷೆ ನಡೆಯಲಿದೆ.
ಕರ್ನಾಟಕದಲ್ಲಿ 12,400 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ಎಸ್‍ಎಂಎ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ
Next Story





