ಕೋಲಾರ: 31 ನಾಮಪತ್ರ ಹಿಂದೆಗೆತ; ಅಂತಿಮ ಕಣದಲ್ಲಿ 110 ಅಭ್ಯರ್ಥಿಗಳು

ಕೋಲಾರ,ಎ.27: ವಿಧಾನಸಭೆ ಸಾರ್ವತ್ರಿಕ ಚುನಾವಣೆ 2018 ರ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಇಂದು ಒಟ್ಟು 31 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಅಂತಿಮವಾಗಿ ಚುನಾವಣಾ ಕಣದಲ್ಲಿ ಒಟ್ಟು 110 ಅಭ್ಯರ್ಥಿಗಳು ಉಳಿದಿದ್ದಾರೆ.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ(144)ದಿಂದ ಪಕ್ಷೇತರ ಅಭ್ಯರ್ಥಿ ಎಲ್.ಎಸ್ ಚಂದ್ರಶೇಖರ್ ಹಾಗೂ ಕೆ.ಸಿ.ರಮೇಶ್ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರ (145)ದಿಂದ ಒಟ್ಟು 17 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದು, ಅಂತಿಮವಾಗಿ ಒಟ್ಟು 39 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಪಕ್ಷೇತರರಾದ ಎಂ.ಎನ್.ಸತೀಶ, ಜಿ.ಆಲಂಗೂರು ರಾಮಣ್ಣ, ವಿ.ಚಂದ್ರಪ್ಪ, ನಾಗರಾಜ, ಕೆ.ನಾರಾಯಣಪ್ಪ, ಎಂ.ನಂದಿನಿ, ಜಿ.ಮುರಳೀಧರ, ಮಂಜುನಾಥ, ಕೆ. ಜಿ. ಮಂಜುನಾಥ, ಎಂ. ರಾಜಣ್ಣ, ವಿಜಯಕುಮಾರ್, ಎಂ.ವೆಂಕಟರಮಣ, ಎಂ.ವೆಂಕಟರವಣಪ್ಪ, ವೆಂಕಟೇಶಪ್ಪ, ಆರ್.ವೆಂಕಟೇಶಪ್ಪ, ಎಂ.ಎನ್.ಶ್ರೀರಾಮಪ್ಪ ಮತ್ತು ಸುರೇಶ್ ಬಾಬು ಇವರು ಕ್ಷೇತ್ರ ಚುನಾವಣಾಧಿಕಾರಿಗಳಾದ ಆರ್. ರಾಚಪ್ಪ ಅವರಿಂದ ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದಿದ್ದಾರೆ.
ಕೆ.ಜಿ.ಎಫ್ ಮೀಸಲು ವಿಧಾನಸಭಾ ಕ್ಷೇತ್ರ(146)ದಿಂದ ಇಬ್ಬರು ಪಕ್ಷೇತರ ಅಭ್ಯರ್ಥಿಗಳಾದ ಎಂ.ನಂದಿನಿ ಹಾಗೂ ಎನ್.ಶ್ರೀನಿವಾಸ್ ಕ್ಷೇತ್ರ ಚುನಾವಣಾಧಿಕಾರಿಗಳಾದ ಎನ್. ಸುರೇಶ್ ಅವರಿಂದ ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದು, ಒಟ್ಟು 16 ಅಭ್ಯರ್ಥಿಗಳು ಅಂತಿಮ ಪಟ್ಟಿಯಲ್ಲಿ ಉಳಿದಿದ್ದಾರೆ.
ಬಂಗಾರಪೇಟೆ ಮೀಸಲು ವಿಧಾನಸಭಾ ಕ್ಷೇತ್ರ(147) ದಿಂದ ಪಕ್ಷೇತರ ಅಭ್ಯರ್ಥಿಗಳಾದ ಕೆ.ರಂಗಸ್ವಾಮಿ ಹಾಗೂ ನಾರಾಯಣಸ್ವಾಮಿ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದು, ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರ(148)ದಿಂದ 4 ಪಕ್ಷೇತರ ಅಭ್ಯರ್ಥಿಗಳಾದ ಡಾ.ಕೊತ್ತೂರು ಜಿ. ಮಂಜುನಾಥ್, ಸಾದಿಕ್ ಬಾಷ, ಹಾರೋಹಳ್ಳಿ ನಾರಾಯಣಸ್ವಾಮಿ ಹಾಗೂ ಡಾ.ಡಿ.ಕೆ.ರಮೇಶ್ ಅವರು ಕ್ಷೇತ್ರ ಚುನಾವಣಾಧಿಕಾರಿಗಳಾದ ಸುಭಾ ಕಲ್ಯಾಣ್ ಅವರಿಂದ ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದಾರೆ. ಅಂತಿಮವಾಗಿ ಕ್ಷೇತ್ರದಿಂದ ಒಟ್ಟು 21 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಮಾಲೂರು ವಿಧಾನಸಭಾ ಕ್ಷೇತ್ರ(149)ದಿಂದ 4 ಪಕ್ಷೇತರ ಅಭ್ಯರ್ಥಿಗಳಾದ ರತ್ನಮ್ಮ, ಸುನೀತಾ ಕೆ. ಶೆಟ್ಟಿ, ಆರ್.ಎಸ್.ಜಯ್ ಪುನೀತ್ ಹಾಗೂ ಎ.ನಾಗರಾಜು ಅವರು ಕ್ಷೇತ್ರ ಚುನಾವಣಾಧಿಕಾರಿಗಳಾದ ಕೃಷ್ಣಮೂರ್ತಿ ಬಿ.ಆರ್. ಅವರಿಂದ ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದು, ಚುನಾವಣೆಯಲ್ಲಿ ಅಂತಿಮವಾಗಿ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.







