ವಾಟ್ಸ್‌ಆ್ಯಪ್ ಮೂಲಕ ಮಾದಕ ದ್ರವ್ಯ ಮಾರಾಟ; ದಂಡ

ದುಬೈ, ಎ. 28: ವಾಟ್ಸ್‌ಆ್ಯಪ್ ಮೂಲಕ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನಿಗೆ ದುಬೈಯ ನ್ಯಾಯಾಲಯವೊಂದು 10,000 ದಿರ್ಹಮ್ (1,81,380 ರೂಪಾಯಿ) ದಂಡ ವಿಧಿಸಿದೆ.
ದುಬೈಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ 41 ವರ್ಷದ ಪಾಕಿಸ್ತಾನಿ ವ್ಯಕ್ತಿಯು, ಮಾದಕ ದ್ರವ್ಯ ವ್ಯವಹಾರಗಳನ್ನು ವಾಟ್ಸ್‌ಆ್ಯಪ್ ಮೂಲಕ ಮಾಡಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಆತನನ್ನು ಗಡಿಪಾರು ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಅಪರಾಧಿಯನ್ನು ಕಳೆದ ವರ್ಷದ ಡಿಸೆಂಬರ್ 26ರಂದು ಅಲ್-ಮುರಕ್ಕಬತ್ ಪ್ರದೇಶದಲ್ಲಿ ಬಂಧಿಸಲಾಗಿತ್ತು.
Next Story





