Dr Khan is our hero: ಡಾ. ಕಫೀಲ್ ಪ್ರಾಣ ಉಳಿಸಿದ ಮಕ್ಕಳ ಕುಟುಂಬ ಸದಸ್ಯರಿಂದ ಭರ್ಜರಿ ಸ್ವಾಗತ

ಗೋರಖ್ ಪುರ,ಎ.28 : ಗೋರಖ್ ಪುರ ಆಸ್ಪತ್ರೆ ದುರಂತದ ಬಳಿಕ ಹಲವು ಮಕ್ಕಳ ಪ್ರಾಣ ಉಳಿಸಿ ಹೀರೊ ಆದ ಬೆನ್ನಿಗೇ ಯೋಗಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರಿದ್ದ ಡಾ. ಕಫೀಲ್ ಖಾನ್ ಎಂಟು ತಿಂಗಳ ಬಳಿಕ ಜಾಮೀನು ಪಡೆದು ಶನಿವಾರ ಬಿಡುಗಡೆಯಾದರು. ಸುದೀರ್ಘ ಜೈಲು ವಾಸದಿಂದ ಸಂಪೂರ್ಣ ಕಳೆಗುಂದಿದಂತಾಗಿದ್ದ ಡಾ ಕಫೀಲ್ ಗೆ ಜೈಲಿನಿಂದ ಹೊರಬರುವಾಗ ಅಚ್ಚರಿಯ ಸ್ವಾಗತ ಕಾದಿತ್ತು.
ಡಾ. ಕಫೀಲ್ ಪ್ರಾಣ ಉಳಿಸಿದ್ದ ಮಕ್ಕಳ ಮನೆಯವರು ಅವರನ್ನು ಸ್ವಾಗತಿಸಲು ಬಂದು ಸೇರಿದ್ದರು. 'Dr Khan is our hero' ಎಂಬ ಘೋಷಣೆ ಇದ್ದ ಪ್ಲಕಾರ್ಡ್ ಗಳನ್ನು ಹಿಡಿದುಕೊಂಡು ಅವರು ಕಫೀಲ್ ರನ್ನು ಸ್ವಾಗತಿಸಿದರು. ಕಫೀಲ್ ಜೈಲು ಸೇರಿದ್ದರಿಂದ ಕಂಗಾಲಾಗಿದ್ದ ಅವರ ಕುಟುಂಬ ಸದಸ್ಯರು ಅತ್ಯಂತ ಸಂತಸದಿಂದ ಕಂಡು ಬಂದರು. ಪತ್ರಕರ್ತರು ಪ್ರಶ್ನೆ ಕೇಳಲು ಮುಗಿಬಿದ್ದಾಗ 'ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ' ಎಂದು ಕಫೀಲ್ ಹೇಳಿ ಹೊರಟರು.
Next Story





