ಮುಂಬೈ ಇಂಡಿಯನ್ಸ್ಗೆ ಜಯ

ರೋಹಿತ್ ಶರ್ಮಾ ಔಟಾಗದೆ 56 ರನ್(33ಎ, 6ಬೌ,2ಸಿ)
ಪುಣೆ, ಎ.28: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಟ್ವೆಂಟಿ-20 ಟೂರ್ನಿಯ 27ನೇ ಪಂದ್ಯದಲ್ಲಿ ಶನಿವಾರ ಮುಂಬೈ ಇಂಡಿಯನ್ಸ್ ತಂಡ ಎಂಟು ವಿಕೆಟ್ಗಳ ಜಯ ಗಳಿಸಿದೆ.
ಗೆಲುವಿಗೆ 170 ರನ್ಗಳ ಸವಾಲು ಪಡೆದ ಮುಂಬೈ ಇಂಡಿಯನ್ಸ್ ತಂಡ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 170 ರನ್ ಗಳಿಸಿತು.
ನಾಯಕ ರೋಹಿತ್ ಶರ್ಮಾ ಔಟಾಗದೆ 56 ರನ್(33ಎ, 6ಬೌ,2ಸಿ) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಎವಿನ್ ಲೆವಿಸ್ 47 ರನ್, ಸೂರ್ಯಕುಮಾರ್ ಯಾದವ್ 44 ರನ್, ಹಾರ್ದಿಕ್ ಪಾಂಡ್ಯ ಔಟಾಗದೆ 13 ರನ್ ಗಳಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 169 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸುರೇಶ್ ರೈನಾ ಭರ್ಜರಿ ಬ್ಯಾಟಿಂಗ್ ಮಾಡಿ ಅಜೇಯ 75 ರನ್(47ಎ, 6ಬೌ,4ಸಿ) ಗಳಿಸಿದರು.
ಅಂಬಟಿ ರಾಯುಡು 46ರನ್(35ಎ, 2ಬೌ,4ಸಿ), ನಾಯಕ ಮಹೇಂದ್ರ ಸಿಂಗ್ ಧೋನಿ 26ರನ್, ಶೇನ್ ವ್ಯಾಟ್ಸನ್ 12 ರನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ 3ರನ್ ಸೇರಿಸಿದರು.
ಮುಂಬೈ ತಂಡದ ಮೆಕ್ಲೀನಘನ್ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದರು.







