Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾಭಾರತಿವಾರ್ತಾಭಾರತಿ29 April 2018 12:19 AM IST
share
ದಿಲ್ಲಿ ದರ್ಬಾರ್

ಬಿಜೆಪಿಯಲ್ಲಿ ಗೊಂದಲ ಮೂಡಿಸಿದ ಮಮತಾ
 ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ದೋಷಾರೋಪಣೆ ನೋಟಿಸ್ ನೀಡಿ, ಕಾಂಗ್ರೆಸ್ ತಪ್ಪು ಮಾಡಿದೆಯೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಹೇಳಿದ್ದರು. ಸೋನಿಯಾ ಹಾಗೂ ರಾಹುಲ್ ಇಬ್ಬರೂ ಈ ವಿಷಯದಲ್ಲಿ ಮುಂದುವರಿಯಬಾರದೆಂದು ಆಕೆ ಕಿವಿಮಾತು ಹೇಳಿದ್ದರು. ಬಿಜೆಪಿಯ ಸಂಪೂರ್ಣ ಬೆಂಬಲವನ್ನು ಹೊಂದಿರುವ ನ್ಯಾಯಮೂರ್ತಿ ಮಿಶ್ರಾರ ಬೆಂಬಲಕ್ಕೆ ಮಮತಾ ನಿಂತರೆಂದು ದಿಲ್ಲಿಯ ರಾಜಕೀಯವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಮಮತಾ ಅವರು ಕಾಂಗ್ರೆಸ್‌ನ ಬೆಂಬಲಕ್ಕೆ ನಿಂತರೂ ಆಕೆ ಕಳೆದುಕೊಳ್ಳುವಂತಹದ್ದು ಏನೂ ಇಲ್ಲವೆಂದು ಇನ್ನು ಕೆಲವರು ಹೇಳುತ್ತಾರೆ. ಆದರೆ ಮಮತಾ ಹಾಗೆ ಮಾಡಲಿಲ್ಲ. ತನ್ನ ಮುಂದಿನ ನಡೆಯ ಬಗ್ಗೆ ಬಿಜೆಪಿಯನ್ನು ಊಹಾಪೋಹದಲ್ಲಿರಿಸಲು ಮಮತಾ ಬಯಸಿದ್ದಾರೆಂಬುದು ಇನ್ನು ಕೆಲವರ ಲೆಕ್ಕಾಚಾರವಾಗಿದೆ. ರಾಜ್ಯದಲ್ಲಿ ಪಂಚಾಯತ್ ಚುನಾವಣೆಗೆ ಮುನ್ನ ಭುಗಿಲೆದ್ದ ಹಿಂಸಾಚಾರವನ್ನು ನಿಭಾಯಿಸಿದ ರೀತಿಗಾಗಿ ವ್ಯಾಪಕವಾಗಿ ಟೀಕೆಯನ್ನು ಎದುರಿಸುತ್ತಿರುವಾಗಲೇ ಹಾಗೂ ಹಿಂಸಾಚಾರದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿರುವ ಸಮಯದಲ್ಲೇ ಪರಿಸ್ಥಿತಿಗೆ ತಕ್ಕಂತೆ ತಾನು ನಿಲುವು ತಾಳಬಲ್ಲೆನೆಂಬ ಸೂಚನೆಗಳನ್ನು ಮಮತಾ ಬಿಜೆಪಿಯ ಕೇಂದ್ರೀಯ ನಾಯಕತ್ವಕ್ಕೆ ನೀಡಿದ್ದಾರೆ. ಪಕ್ಷದ ಕೇಂದ್ರೀಯ ನಾಯಕತ್ವದ ಜೊತೆ ಮಮತಾ ಸಹಮತ ಹೊಂದಿರುವಾಗ, ಹಿಂಸಾಚಾರದ ಘಟನೆ ಬಗ್ಗೆ ಮಮತಾ ಜೊತೆ ಹೇಗೆ ವ್ಯವಹರಿಸಬೇಕೆಂಬ ಗೊಂದಲದಲ್ಲಿ ಪ.ಬಂಗಾಳದ ಬಿಜೆಪಿ ಸಿಲುಕಿದೆ. ಟಿಎಂಸಿ ಪಕ್ಷದ ನಾಯಕರು ಹೇಳುವಂತೆ, ಬಿಜೆಪಿಯನ್ನು ಊಹಾಪೋಹಗಳ ನಡುವೆ ಸಿಲುಕಿಸುವುದೇ ಮಮತಾರ ಕಾರ್ಯತಂತ್ರವಾಗಿದೆ.


ಇಕ್ಕಟ್ಟಿನಲ್ಲಿ ಅಧೀರ್
ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸಲು ಸಿದ್ಧರಾಗಿರಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಲೋಕಸಭಾ ಸದಸ್ಯ ಅಧೀರ್ ಚೌಧುರಿಗೆ ತಿಳಿಸಿದಾಗ ಆತ ಸ್ವಲ್ಪಮಟ್ಟಿಗೆ ಗೊಂದಲಕ್ಕೊಳಗಾಗಿದ್ದರು. ಕರ್ನಾಟಕದಂತಹ ರಾಜ್ಯದಲ್ಲಿ, ತಾನು ಏನು ಮಾಡಲು ಸಾಧ್ಯವೆಂದು ಅಧೀರ್, ರಾಹುಲ್‌ರನ್ನು ಪ್ರಶ್ನಿಸಿದ್ದರು. ಹರಕುಮುರುಕು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿ, ಜನರ ಮನವೊಲಿಸಲು ತನಗೆ ಹೇಗೆ ತಾನೆ ಸಾಧ್ಯವೆಂದು ಸ್ವತಃ ಅಧೀರ್ ಗೊಂದಲಕ್ಕೀಡಾಗಿದ್ದಾರೆ. ಅದೇನೇ ಇರಲಿ, ಪ್ರಬಲವಾದ ವಿರೋಧಿಗಳನ್ನು ಹೇಗೆ ನಿಭಾಯಿಸಬಹುದೆಂಬುದನ್ನು ಅಧೀರ್‌ರಿಂದ ರಾಜ್ಯದ ಕಾಂಗ್ರೆಸ್ ನಾಯಕರು ಪಾಠಕಲಿತುಕೊಳ್ಳಬಹುದಾಗಿದೆ. ಪ.ಬಂಗಾಳದಲ್ಲಿ ತನ್ನ ಪ್ರಾಬಲ್ಯವನ್ನು ಒಪ್ಪದ ಕಾಂಗ್ರೆಸ್‌ನ ಕೊನೆಯ ನಾಯಕ ಅಧೀರ್ ಎಂಬುದಾಗಿ ಮುಖ್ಯಮಂತ್ರಿ ಮಮತಾ ಭಾವಿಸಿದ್ದರು. ಅಂತೆಯೇ ಅವರನ್ನು ರಾಜಕೀಯವಾಗಿ ಬಗ್ಗು ಬಡಿಯಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಅಧೀರ್ ಅವೆಲ್ಲವನ್ನೂ ಎದುರಿಸಿ, ಚುನಾವಣೆಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಅಮಿತ್ ಶಾ ಹಾಗೂ ನರೇಂದ್ರ ಮೋದಿ ಮತ್ತಿತರ ಪ್ರಬಲ ನಾಯಕರ ಜೊತೆ ಹೋರಾಡಬೇಕಾಗಿದೆ. ಅವರನ್ನು ಹೇಗೆ ಎದುರಿಸಬೇಕೆಂಬುದನ್ನು ಅಧೀರ್ ಕಾಂಗ್ರೆಸ್ ನಾಯಕರಿಗೆ ಕಲಿಸಬಹುದಾಗಿದೆ.


ಹೈಕಮಾಂಡ್ ಆದೇಶ ಪಾಲಕ ಚೌಹಾಣ್
 ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರು ಸಿಂಗ್ರೌಲಿ ಜಿಲ್ಲೆಯಲ್ಲಿ ರೈತರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾಗ, ಅವರ ಭದ್ರತಾ ಸಿಬ್ಬಂದಿಯೊಬ್ಬ ನಡುವೆ ಬಂದು, ಅವರಿಗೆ ತುರ್ತು ಕರೆಯೊಂದು ಬಂದಿರುವುದಾಗಿ ತಿಳಿಸಿದ್ದ. ಆಗ ಮುಖ್ಯಮಂತ್ರಿ, ತನಗೆ ಒಂದು ನಿಮಿಷ ಕಾಲಾವಕಾಶ ನೀಡುವಂತೆ ಸಭೆಯಲ್ಲಿದ್ದವರಿಗೆ ಸಂಜ್ಞೆ ಮಾಡಿದಾಗ ಅವರೆಲ್ಲರೂ ಗೊಳ್ಳೆಂದು ನಕ್ಕರು. ಆನಂತರ ಆ ಕರೆಯ ಬಗ್ಗೆ ಚೌಹಾಣ್ ಬಿಗಿವೌನ ತಾಳಿದ್ದರಾದರೂ, ಕೆಲವರು ಆ ಕರೆಯು ಹೈಕಮಾಂಡ್‌ನ ಯಾರೋ ಓರ್ವ ಹಿರಿಯ ನಾಯಕ ರದ್ದಾಗಿರಬಹುದೆಂದು ಊಹಿಸಿದ್ದರು. ನ್ಯಾಯಾಧೀಶ ಲೋಯಾ ಸಾವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪನ್ನು ಪ್ರಶಂಸಿಸುವ ಹೇಳಿಕೆಯನ್ನು ನೀಡುವಂತೆ ಮುಖ್ಯಮಂತ್ರಿಗೆ ಆ ಫೋನ್ ಕರೆಯಲ್ಲಿ ಸೂಚನೆ ನೀಡಲಾ ಗಿತ್ತೆನ್ನಲಾಗಿದೆ. ಈ ಸೂಚನೆಯನ್ನು ಕಡೆಗಣಿಸಲು ಚೌಹಾಣ್‌ಗೆ ಹೇಗೆ ತಾನೇ ಸಾಧ್ಯ. ಹೈಕಮಾಂಡ್‌ನ ಆದೇಶವನ್ನು ಚಾಚೂತಪ್ಪದೆ ಅನುಸರಿಸಿದ ಶಿವರಾಜ್ ಸಿಂಗ್ ಚೌಹಾಣ್ ಅವರು ಸಮರ್ಪಕವಾದ ಹೇಳಿಕೆಯೊಂದನ್ನು ನೀಡಿ, ನ್ಯಾಯಮೂರ್ತಿ ಲೋಯಾರ ಸಾವಿಗೆ ಸಂಬಂಧಿಸಿ ಇಡೀ ವಿಷಯವು ಅಮಿತ್‌ಶಾಗೆ ಕಳಂಕ ಹಚ್ಚು ದುರುದ್ದೇಶದಿಂದ ಕೂಡಿದ್ದಾಗಿತ್ತು ಹಾಗೂ ಅವರ ಸಾವಿನ ಪ್ರಕರಣದ ಬಗ್ಗೆ ತನಿಖೆಗೆ ಆದೇಶ ನೀಡದೆ ಇರುವ ಮೂಲಕ ಸುಪ್ರೀಂಕೋರ್ಟ್ ಸರಿಯಾದ ನಿರ್ಧಾರವನ್ನು ಕೈಗೊಡಿಂದೆಯೆಂದು ತಿಳಿಸಿದರು. ಬಿಜೆಪಿ ಆಡಳಿತ ಯಂತ್ರವು ಎಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಹಾಗೂ ಪಕ್ಷಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವ ನಿಲುವನ್ನು ಕೈಗೊಳ್ಳಬೇಕೆಂಬ ಸಂದೇಶವನ್ನು ಅದು ಎಷ್ಟು ಸಮರ್ಪಕವಾಗಿ ತನ್ನ ನಾಯಕರಿಗೆ ರವಾನಿಸುತ್ತಿದೆಯೆಂಬುದಕ್ಕೂ ಇದು ನಿದರ್ಶನವೆಂದು ಕೆಲವು ಪತ್ರಕರ್ತರು ಬೆಟ್ಟು ಮಾಡಿ ತೋರಿಸಿದ್ದಾರೆ.


ಯೆಚೂರಿಯ ಗೆಲುವು
ವಿಸ್ತೃತವಾಗಿ ವರದಿಯಾದಂತೆ ಭಾರತೀಯ ಕಮ್ಯುನಿಸ್ಟ್ ಪಕ್ಷವು ಕಾಂಗ್ರೆಸ್ ಪಕ್ಷದ ಜೊತೆ ಯಾವುದೇ ಒಪ್ಪಂದಗಳನ್ನು ಮಾಡದಿರುವ ತನ್ನ ನೀತಿಯನ್ನು ಕೈಬಿಡಲು ನಿರ್ಧರಿಸಿದೆ. ಆ ಮೂಲಕ ಅದು ಸಿಪಿಎಂನ ಪಶ್ಚಿಮ ಬಂಗಾಳ ಘಟಕವು, ಅದುವೇ ಹೇಳಿಕೊಂಡಂತೆ ‘ಇಬ್ಬರ ಪೈಕಿ ಕಡಿಮೆ ದುಷ್ಟ’ನ ಜೊತೆ ಚುನಾವಣಾ ಒಡಂಬಡಿಕೆಗೆ ಮುಂದಾಗಿದೆ. ಹೈದರಾಬಾದ್‌ನಲ್ಲಿ ನಡೆದ ಪಕ್ಷದ 22ನೇ ಸಮಾವೇಶದಲ್ಲಿ ಕೈಗೊಳ್ಳಲಾದ ನಿರ್ಣಯದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ನೇತೃತ್ವದ ಎರಡು ಬಣಗಳು ಪರಸ್ಪರರ ವಿರುದ್ಧ ಆರೋಪಗಳ ಬಾಣಗಳನ್ನೇ ಎಸೆದವು. ಆದರೆ ಕೊನೆಗೆ ಯೆಚೂರಿಗೆ ಗೆಲುವು ಲಭಿಸಿತು. ಸಮಾವೇಶದಂದು ಪ್ರತಿರಾತ್ರಿಯೂ ಯೆಚೂರಿ ಹೈದರಾಬಾದ್‌ನ ಹೊಟೇಲೊಂದರಲ್ಲಿ ಸಿಗರೇಟುಗಳನ್ನು ಸೇದುತ್ತಾ, ಪಶ್ಚಿಮ ಬಂಗಾಳದ ಇನ್ನಿಬ್ಬರು ಕಾಮ್ರೇಡ್‌ಗಳೊಂದಿಗೆ, ಕಾರಟ್‌ರನ್ನು ಹೇಗೆ ಮಣಿಸುವುದೆಂಬ ಬಗ್ಗೆಯೇ ತಾಸುಗಟ್ಟಲೆ ಚರ್ಚಿಸುತ್ತಿದ್ದರೆನ್ನಲಾಗಿದೆ. ಕೊನೆಗೂ ಅವರಿಗೆ ಅದು ಸಾಧ್ಯವಾದಾಗ ಯೆಚೂರಿ ಮುಗುಳ್ನಗುತ್ತಾ, ಪತ್ರಕರ್ತರೊಂದಿಗೆ ಮಾತನಾಡಿ, ಪಕ್ಷದಲ್ಲಿನ ತೀವ್ರವಾದಿಗಳು ತನ್ನ ಜೀವನವನ್ನು ಎಷ್ಟು ಕಷ್ಟಕ್ಕೀಡು ಮಾಡಿದ್ದಾರೆಂದು ಹೇಳಿಕೊಂಡು ಹರಟುತ್ತಿದ್ದರು.


ಮೋದಿಯ ಹುಕುಂ, ಹೊಸಬರು ಗರಂ

ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಬಿಜೆಪಿ ಸದಸ್ಯರು ತುಂಬಾ ಸಂತಸದಿಂದಿರುವ ಹಾಗೆ ಕಾಣುತ್ತಿಲ್ಲ. ಸಂಸತ್ ಕಲಾಪಗಳು ಸ್ಥಗಿತಗೊಂಡಿರುವುದಕ್ಕೆ ಒಂದು ತಿಂಗಳ ವೇತನವನ್ನು ಕೈಬಿಡುವಂತೆ ಪ್ರಧಾನಿ ಬಿಜೆಪಿ ಸಂಸದರಿಗೆ ಸೂಚಿಸಿರುವುದು ಅವರ ಬೇಸರಕ್ಕೆ ಕಾರಣವಾಗಿದೆ. ಕೆಲವು ಹೊಸಬರಂತೂ ಇದೊಂದು ಅಶುಭಕರವಾದ ಆರಂಭವೆಂದು ಭಾವಿಸಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾಗಿದ್ದಕ್ಕಾಗಿ ಯಾವಾಗ ‘ಪಾರ್ಟಿ’ ಕೊಡುವಿರಿ ಎಂದು ನೂತನ ಸಂಸದರಲ್ಲೊಬ್ಬರನ್ನು ಕೇಳಿದಾಗ ಒಮ್ಮೆ ನನ್ನ ಕೈಗೆ ವೇತನ ಬಂದಾಗಲೇ ತನಗೆ ಸಂಭ್ರಮವಾಗಲಿದೆಯೆಂದು ಹೇಳಿಕೊಡಿದ್ದಾರೆ. ನೂತನ ಸಂಸದರ ಜೊತೆ ದೀರ್ಘಾವಧಿಯ ನಂಟನ್ನು ಬೆಳೆಸಲು ಬಯಸುವ ಕೆಲವು ಪತ್ರಕರ್ತರು ಅವರೊಂದಿಗೆ ತಮಗೆ ಯಾವಾಗ ಪಾರ್ಟಿ ಕೊಡುವಿರಿ ಎಂದು ಹೇಳುವ ಮೂಲಕ ಮಾತುಕತೆಯನ್ನು ಆರಂಭಿಸುತ್ತಾರೆ. ಕನಿಷ್ಠ ಅವರ ಖಾತೆಗಳಿಗೆ ವೇತನವು ಬಂದು ಬೀಳುವವರೆಗಾದರೂ ನೂತನ ಸದಸ್ಯರಿಗೆ ಸಂತಸವಿರದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X