ವಿನಯಕುಮಾರ್ ಸೊರಕೆ ಪರ ಪುತ್ರಿ, ಅಳಿಯ ಚುನಾವಣಾ ಪ್ರಚಾರ

ಕಾಪು, ಎ.29: ಕಾಪು ಶಾಸಕ ಮತ್ತು ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಪರ ಪುತ್ರಿ ದ್ವಿತಿ ಸೊರಕೆ ಮತ್ತು ಅಳಿಯ ಸಿದ್ಧಾರ್ಥ್ ಕೋಟ್ಯಾನ್ ಇಂದು ಉದ್ಯಾವರ ಗುಡ್ಡೆಅಂಗಡಿ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲನಿಯಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಈ ಸಂದರ್ಭ ಮಾತನಾಡಿದ ದ್ವಿತಿ ಸೊರಕೆ, ತಂದೆಯವರು ಮಾಡಿದ ಅಭಿವೃದ್ಧಿ ಕಾರ್ಯ ಗೆಲುವಿಗೆ ಮುನ್ನಡೆಯಾಗಲಿದೆ. ಮತ ಪ್ರಚಾರದ ಸಂದರ್ಭ ತಂದೆಯವರ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿಗುತ್ತಿವೆ. ಈ ಬಾರಿ ಚುನಾವಣೆಯಲ್ಲಿ ಅವರ ಗೆಲವು ನಿಶ್ಚಿತ ಎಂದು ಹೇಳಿದರು.
ಶಾಸಕರಾಗಿ ಉತ್ತಮ ಕಾರ್ಯನಿರ್ವಹಿಸಿದ ವಿನಯ್ ಕುಮಾರ್ ಸೊರಕೆ ಯವರ ವ್ಯಕ್ತಿತ್ವವೇ ಮತದಾರರನ್ನು ಬಹಳಷ್ಟು ಆಕರ್ಷಿಸಿದೆ. ಅವರ ಐತಿಹಾಸಿಕ ಅಭಿವೃದ್ಧಿ ಕಾರ್ಯವೇ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಸೊರಕೆ ಅಳಿಯ ಸಿದ್ಧಾರ್ಥ್ ಕೋಟ್ಯಾನ್ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಿರೀಶ್ ಕುಮಾರ್, ಕಿರಣ್ ಕುಮಾರ್, ರಿಯಾಝ್ ಪಳ್ಳಿ, ಪ್ರಭಾಕರ್, ಗಣೇಶ್, ಅನ್ಸಾರ್, ಗಿರೀಶ್ ಭಾಸ್ಕರ ಕೋಟ್ಯಾನ್, ನಾಗೇಶ್ ಉದ್ಯಾವರ, ಹರೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







