ಕಾರ್‌ಸ್ಟ್ರೀಟ್ ಪರಿಸರದಲ್ಲಿ ಜೆ.ಆರ್. ಲೋಬೊ ಮತ ಯಾಚನೆ

ಮಂಗಳೂರು, ಎ.29: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ.ಆರ್.ಲೋಬೊ ರವಿವಾರ ನಗರದ ಕಾರ್‌ಸ್ಟ್ರೀಟ್,ವಿ.ಟಿ.ರಸ್ತೆ, ಗಣಪತಿ ದೇವಸ್ಥಾನದ ಪರಿಸರದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.
ಕಾರ್‌ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಶ್ರೀ ಲಕ್ಷ್ಮೀ ನರಸಿಂಹ ಮಠ, ಕಾತ್ಯಾಯಣಿ ಮಠ, ಪಾರ್ವತಿ ಆಚಾರ್ಯ ಮಠಗಳಿಗೆ ಭೇಟಿ ನೀಡಿದರು.
ಈ ಸಂದಭ ಮಾತನಾಡಿದ ಜೆ.ಆರ್.ಲೋಬೊ 5 ವರ್ಷಗಳ ಅವಧಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಮುಖ್ಯರಸ್ತೆಗಳಿಗೆ ಕಾಂಕ್ರಿಟೀಕರಣ ನಡೆಸಲಾಗಿದೆ. ಅದಲ್ಲದೇ ಒಳ ರಸ್ತೆಗಳಿಗೂ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿಪಡಿಸಲಾಗಿದೆ. ನಗರಗಳ ಅಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರ ಮಹತ್ವದ್ದು. ಮಂಗಳೂರಿನ ಜನತೆ ಅಭಿವೃದ್ಧಿ ಕಡೆಗೆ ಬೆಂಬಲ ಸೂಚಿಸಿದ್ದಾರೆ. ಜನತೆಯ ನಿರೀಕ್ಷೆಯನ್ನು ನಾವು ಎಂದಿಗೂ ಹುಸಿ ಮಾಡುವುದಿಲ್ಲ ಎಂದರು.
ಈ ಸಂದರ್ಭ ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ರಾಮದಾಸ್ ಪ್ರಭು, ಮೋಹನ್ ಶೆಟ್ಟಿ, ಮೋಹನ್ ಮೆಂಡನ್, ವಿಜಯೇಂದ್ರ ಭಟ್, ಸುರೇಂದ್ರ ಶೆಣೈ, ಸಮರ್ಥ ಭಟ್, ಶಾಂತಳಾ ಗಟ್ಟಿ, ವಿಘ್ನೇಶ್, ವಿನುತಾ ಭಟ್, ಶ್ರೇಯಸ್ ಭಟ್ ಉಪಸ್ಥಿತರಿದ್ದರು.





