ಪ್ರಥಮ ಪಿಯುಸಿ ವಿಜ್ಞಾನ ಕೋರ್ಸಿನ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಎ. 29: ದೇರಳಕಟ್ಟೆಯ ಸರಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನಲ್ಲಿ 2018-19ನೇ ಸಾಲಿಗೆ ಪ್ರಥಮ ಪಿಯುಸಿ ವಿಜ್ಞಾನ ಕೋರ್ಸಿನ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿಸಿಎಂಬಿ 40 ಸೀಟುಗಳು ಹಾಗೂ ಪಿಸಿಎಂಸಿಎಸ್ 40 ಸಹಿತ 80 ಸೀಟುಗಳು ಲಭ್ಯವಿದ್ದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ಸಮುದಾಯದ ಬಾಲಕಿಯರಿಗೆ ಶೇ.75 ಹಾಗೂ ಇತರೆ ಸಮುದಾಯದ ಬಾಲಕಿಯರಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿದೆ. ಮಾಹಿತಿಗೆ ಕಾಲೇಜಿನ ಪ್ರಾಚಾರ್ಯರನ್ನು (ಮೊ.9535323262, 0824-2211078) ಸಂಪರ್ಕಿಸಬಹುದು.
ವಸತಿ ಕಾಲೇಜಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ, ಉಚಿತ ಭೊಜನ, ಪಠ್ಯಪುಸ್ತಕ ಮತ್ತು ಲೇಖನ ಸಾಮಗ್ರಿ, ಹಾಸಿಗೆ, ಹೊದಿಕೆಗಳನ್ನು ಒದಗಿಸಲಾಗುವುದು. ಉತ್ತಮ ಗ್ರಂಥಾಲಯ ಹಾಗೂ ಪ್ರಯೋಗಾಲಯಗಳ ಸೌಲಭ್ಯವಿದೆ ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ಸೋಪ್, ಟೂತ್ ಬ್ರಶ್, ಟೂತ್ ಪೇಸ್ಟ್, ತೆಂಗಿನ ಎಣ್ಣೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು.
ಕಂಪ್ಯೂಟರ್ ಹಾಗೂ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ನಡೆಸಲಾಗುವುದು. ಧಾರ್ಮಿಕ ಶಿಕ್ಷಣದ ಭೋದನಾ ತರಗತಿ ವ್ಯವಸ್ಥೆ ಇದೆ. ನುರಿತ ಹಾಗೂ ಖಾಯಂ ಉಪನ್ಯಾಸಕ ಸಿಬ್ಬಂದಿ ವರ್ಗವನ್ನು ಹೊಂದಿದೆ. ಉಚಿತ ಸಮವಸ್ತ್ರ ಹಾಗೂ ಶೂಗಳನ್ನು ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.







