ಅಚ್ಛೇ ದಿನ್ ಯಾರಿಗೂ ಬಂದಿಲ್ಲ: ನಟ ಯೋಗೀಶ್

ಬೆಂಗಳೂರು, ಎ.29: ಬಿಜೆಪಿ ಸರಕಾರದವರು ಯಾವತ್ತೂ ಅಚ್ಛೇ ದಿನ್, ಅಚ್ಛೇ ದಿನ್ ಅಂತ ಹೇಳುತ್ತಾನೇ ಇದ್ದಾರೆ. ಆದರೆ, ಈ ಅಚ್ಛೇ ದಿನ್ ಯಾರಿಗೂ ಬಂದಿಲ್ಲ ನಟ ಯೋಗೀಶ್ ಹೇಳಿದರು.
ರವಿವಾರ ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಅಚ್ಛೇ ದಿನ್ ಏನು ಅನ್ನೋದು ಅರ್ಥನೂ ಆಗಿಲ್ಲ ನಮಗೆ. ಇದೊಂದು ಸುಳ್ಳು ಭರವಸೆ ಎಂದು ಹೇಳಿದರು.
ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ನಾನು ಇರೋವರೆಗೂ ಕಾಂಗ್ರೆಸ್ ಬೆಂಬಲವಾಗಿರುತ್ತೇನೆ. ನೀವೂ ಕೂಡ ಕಾಂಗ್ರೆಸ್ ಮತ ನೀಡಬೇಕು ಎಂದ ಅವರು, ಬಿಜೆಪಿಯವರು ಯಾವ ಕೆಲಸನೂ ಮಾಡಿಕೊಟ್ಟಿಲ್ಲ. ನಿಮ್ಮಲ್ಲರನ್ನೂ ಮೆಚ್ಚಿಸಬೇಕು ಅಂತ ನಾನು ಇದನ್ನು ಹೇಳುತ್ತಿಲ್ಲ, ಇದು ನನ್ನ ಸ್ವಂತ ಅನುಭವ ಎಂದರು.
Next Story





