ಮೈಸೂರು: ನೂತನ ಜಿಲ್ಲಾಧಿಕಾರಿಯಾಗಿ ಅಭಿರಾಮ್ ಜಿ. ಶಂಕರ್ ನೇಮಕ
ಮೈಸೂರು,ಎ.29: ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ಅಭಿರಾಮ್ ಜಿ ಶಂಕರ್ ಅವರನ್ನು ಚುನಾವಣಾ ಆಯೋಗ ನಿಯೋಜನೆಗೊಳಿಸಿದೆ.
ಪ್ರಸ್ತುತ ಜಿಲ್ಲಾಧಿಕಾರಿಯಾಗಿದ್ದ ದರ್ಪಣ್ ಜೈನ್ ಅವರನ್ನು ವರ್ಗಾವಣೆಗೊಳಿಸಿ ಅಭಿರಾಮ್ ಜಿ. ಶಂಕರ್ ಅವರನ್ನು ನಿಯೋಜಿಸಲಾಗಿದೆ. ಚುನಾವಣೆ ಘೋಷಣೆಯಾದ ಬಳಿಕ ಇವರು ಮೂರನೇ ಜಿಲ್ಲಾಧಿಕಾರಿ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಡಿ.ರಂಧೀಪ್ ಅವರನ್ನು ವರ್ಗಾವಣೆಗೊಳಿಸಿ ಶಿವಕುಮಾರ್ ಅವರು ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ನಂತರ ಒಂದು ವಾರಗಳಷ್ಟೇ ಹಿಂದೆ ದರ್ಪಣ್ ಜೈನ್ ಆಗಮಿಸಿ ಅಧಿಕಾರ ಸ್ವೀಕರಿಸಿದ್ದರು. ಸದ್ಯ ಅವರನ್ನು ವರ್ಗಾವಣೆಗೊಳಸಿ ಅಭಿರಾಮ್ ಜಿ.ಶಂಕರ್ ಅವರನ್ನು ನೇಮಿಸಲಾಗಿದೆ.
Next Story





