ನಕ್ಸಲ್‌ಪೀಡಿತ ಪ್ರದೇಶಗಳು,ಕಾಶ್ಮೀರದಲ್ಲಿ ಎಸ್‌ಆರ್‌ಇ ನಿಧಿಯ ನೇರ ಬಳಕೆಗೆ ಸಿಆರ್‌ಪಿಎಫ್‌ಗೆ ಅನುಮತಿ

ಹೊಸದಿಲ್ಲಿ,ಎ.29: ನಕ್ಸಲ್ ಪೀಡಿತ ಪ್ರದೇಶಗಳು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆಗಳಿಗಾಗಿ ಸಿಆರ್‌ಪಿಎಫ್ ಅನ್ನು ಹೆಚ್ಚು ಸುಸಜ್ಜಿತ ಗೊಳಿಸಲು ಸರಕಾರವು,ಅದು ತನ್ನ ಯೋಧರಿಗೆ ಮೂಲಸೌಕರ್ಯ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರ ಪ್ರಾಯೋಜಿತ ಭದ್ರತಾ ಸಂಬಂಧಿ ವೆಚ್ಚ(ಎಸ್‌ಆರ್‌ಇ) ನಿಧಿಯನ್ನು ನೇರವಾಗಿ ಬಳಸಿಕೊಳ್ಳಲು ಇದೇ ಮೊದಲ ಬಾರಿಗೆ ಅವಕಾಶ ನೀಡಿದೆ. ಕೇಂದ್ರವು ರಾಜ್ಯಗಳಿಗೆ ಈ ನಿಧಿಯನ್ನು ಒದಗಿಸುತ್ತಿದ್ದು,ಸಿಆರ್‌ಪಿಎಫ್ ಸಂಬಂಧಿತ ರಾಜ್ಯದ ಒಪ್ಪಿಗೆಯನ್ನು ಪಡೆದುಕೊಂಡು ಹಣವನ್ನು ನೇರವಾಗಿ ಬಳಸಿಕೊಳ್ಳ ಬಹುದಾಗಿದೆ.
ಸಿಆರ್‌ಪಿಎಫ್ ತನ್ನ ಮುಖ್ಯ ಕಾರ್ಯಾಚರಣೆ ಪ್ರದೇಶಗಳಲ್ಲಿ ಶಿಬಿರಗಳು,ಬ್ಯಾರಕ್‌ಗಳು ಮತ್ತು ಇತರ ವಸತಿ ಸೌಲಭ್ಯಗಳ ನಿರ್ಮಾಣದಲ್ಲಿ ವಿಳಂಬ ಗತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಈ ಕ್ರಮವನ್ನು ಕೈಗೊಂಡಿದೆ.
ಸಾರಿಗೆ,ಸಂವಹನ,ವಾಹನಗಳ ಬಾಡಿಗೆ,ಶರಣಾಗತ ನಕ್ಸಲರಿಗೆ ಸಹಾಯಧನ,ಯೋಧರಿಗೆ ಮೂಲಸೌಕರ್ಯ ನಿರ್ಮಾಣಗಳಂತಹ ಭದ್ರತಾ ಸಂಬಂಧಿ ವೆಚ್ಚಗಳ ಮರುಪಾವತಿಗಾಗಿ ಕೇಂದ್ರ ಸರಕಾರವು ದೇಶದ ನಕ್ಸಲ್ ಮತ್ತು ಬಂಡಾಯ ಪೀಡಿತ ರಾಜ್ಯಗಳಿಗೆ ಎಸ್‌ಆರ್‌ಇ ಯೋಜನೆಯನ್ನು ಮಂಜೂರು ಮಾಡಿದೆ.
ಉತ್ತಮ ವಸತಿ ಸೌಲಭ್ಯಗಳ ನಿರ್ಮಾಣ ಹಾಗೂ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಾಧನಗಳನ್ನು ಒದಗಿಸುವುದು ದುರ್ಗಮ ಸ್ಥಳಗಳಲ್ಲಿ ಕಾರ್ಯಾಚರಿಸುವ ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಅತ್ಯಂತ ಮುಖ್ಯಕ್ರಮವಾಗಿದೆ ಎಂದು ಹಿರಿಯ ಸಿಆರ್‌ಪಿಎಫ್ ಅಧಿಕಾರಿಯೋರ್ವರು ತಿಳಿಸಿದರು.
ರಾಜ್ಯಗಳಿಂದ ಹಣ ಪಡೆದುಕೊಂಡು ಮೂಲಸೌಕರ್ಯ ಕಾಮಗಾರಿ ಗಳನ್ನು ಪೂರ್ಣಗೊಳಿಸುವಲ್ಲಿ ಗಣನೀಯ ವಿಳಂಬವಾಗುತ್ತಿ ರುವುದರಿಂದ ಸಿಆರ್‌ಪಿಎಫ್‌ನಂತಹ ಪಡೆಗಳು ಎಸ್‌ಆರ್‌ಇ ನಿಧಿಯನ್ನು ನೇರವಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದ ಅವರು,ಸಿಆರ್‌ಪಿಎಫ್ ಈಗಾಗಲೇ ಎಸ್‌ಆರ್‌ಇ ನಿಧಿಯನ್ನು ನೇರವಾಗಿ ಬಳಸಿಕೊಂಡು ಇತ್ತೀಚಿಗೆ ಛತ್ತೀಸ್‌ಗಡದ ಬಿಜಪೂರ ಜಿಲ್ಲೆಯಲ್ಲಿ ಶಿಬಿರಗಳನ್ನು ನಿರ್ಮಿಸಿದೆ ಮತ್ತು ಸುಕುಮಾ ಹಾಗೂ ದಾಂತೆವಾಡಾ ಜಿಲ್ಲೆಗಳಲ್ಲಿ ಶಿಬಿರಗಳ ನಿರ್ಮಾಣ ಕಾರ್ಯ ಪ್ರಗತಿ ಯಲ್ಲಿದೆ ಎಂದರು. ಇದೇ ರೀತಿ ಕಾಶ್ಮೀರ ಕಣಿವೆಯಲ್ಲಿಯೂ ಹೆಚ್ಚಿನ ಸಂಖ್ಯೆಯ ಸಿಆರ್‌ಪಿಎಫ್ ಶಿಬಿರಗಳನ್ನು ನವೀಕರಿಸಲಾಗುತ್ತಿದೆ ಎಂದು ತಿಳಿಸಿದರು.
ಸಿಆರ್‌ಪಿಎಫ್‌ನ ಸುಮಾರು ಒಂದು ಲಕ್ಷ ಸಿಬ್ಬಂದಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮತ್ತು ಸುಮಾರು 60,000 ಸಿಬ್ಬಂದಿ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.







