ಅಭಿವೃದ್ಧಿ ಕಾರ್ಯಗಳಿಂದ ಜನತೆ ಬೆಂಬಲಿಸಲಿದ್ದಾರೆ: ಯು.ಟಿ.ಖಾದರ್

ಉಳ್ಳಾಲ, ಎ. 29: ರಾಜ್ಯದಲ್ಲಿ ಕಾಂಗ್ರೆಸ್‌ನ ಜನಪರ ಯೋಜನೆಗಳಿಗೆ ಮತ್ತು ಮಂಗಳೂರು ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳಿಗೆ ಜನತೆ ಬೆಂಬಲಿ ಸಲಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಬಹುಮತದಲ್ಲಿ ಈ ಬಾರಿ ಕಾಂಗ್ರೆಸ್ ಕ್ಷೇತ್ರದಲ್ಲಿ ವಿಜಯಿಯಾಗಲಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ತಿಳಿಸಿದರು.
ಅವರು ಕೋಟೆಕಾರು ಮಡ್ಯಾರ್ ಬಳಿ ಮನೆ ಮನೆಗೆ ತೆರಳಿ ಮತ ಯಾಚೆನ ನಡೆಸಿದ ಬಳಿಕ ಮಾತನಾಡಿದರು. ಕ್ಷೇತ್ರದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಎಲ್ಲಾ ಧರ್ಮದ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನು ಕೊಟ್ಟಿದ್ದು, ಎಲ್ಲಿಯೂ ತಾರತಮ್ಯ ನಡೆಸಿಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ತೊಡಗಿಸಿಕೊಳ್ಳಲು ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪಿಯೂಷ್ ಮೊಂತೇರೋ, ಚಂದ್ರಹಾಸ್ ರೈ ಪಿಲಾರ್. ಹಮಿದ್ ಹಸನ್ ಮಾಡೂರು, ಆಲ್ವಿನ್ ಡಿ.ಸೋಜ, ಸಂಪತ್ ಮಡ್ಯಾರ್, ಹರೀಶ್ ರಾವ್ ಮಡ್ಯಾರ್, ರಂಜಿತ್ ಶೆಟ್ಟಿ, ವಿಕಾಸ್ ಶೆಟ್ಟಿ, ನೀರಜ್ ಶೆಟ್ಟಿ, ಧೀರಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.





