ಚನ್ನಗಿರಿ: ಮದುವೆ ಊಟ ಸೇವಿಸಿ 210 ಕ್ಕೂ ಹೆಚ್ಚು ಮಂದಿಗೆ ಹೊಟ್ಟೆನೋವು
ಚನ್ನಗಿರಿ,ಎ.29: ಮದುವೆ ಮನೆಯೊಂದರಲ್ಲಿ ಊಟ ಸೇವಿಸಿ 210 ಕ್ಕೂ ಹೆಚ್ಚು ಮಂದಿಗೆ ಹೊಟ್ಟೆನೋವು ಕಾಣಿಸಿಕೊಂಡು, ವಾಂತಿಬೇಧಿಯಿಂದ ನರಳಾಡಿರುವ ಘಟನೆ ತಾಲೂಕಿನ ಜಯಂತಿ ನಗರದಲ್ಲಿ ನಡೆದಿದೆ ಎನ್ನಲಾಗಿದೆ.
ಜಯಂತಿ ನಗರ ಗ್ರಾಮದಲ್ಲಿ ಮಂಜನಾಯ್ಕ ಎಂಬವರು ಮನೆಯಲ್ಲಿ ಮದುವೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಜನರು ಊಟವನ್ನು ಸೇವಿಸಿದ್ದಾರೆ. ನಂತರ ಸುಮಾರು ಸಮಯದ ನಂತರ ಹೊಟ್ಟೆ ನೋವು ಹಾಗೂ ವಾಂತಿಬೇಧಿ ಕಾಣಿಸಿಕೊಂಡಿದೆ. ತಕ್ಷಣ ಅಲ್ಲಿದವರನ್ನು ಪಟ್ಟಣದ ಸರ್ಕಾರಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರನ್ನು ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ರವಾನಿಸಲಾಗಿದೆ. ಊಟದಲ್ಲಿ ಆದ ವ್ಯತ್ಯಾಸದಿಂದ ಈ ರೀತಿ ಅಗಿರಬಹುದು ಅಥವಾ ಊಟಕ್ಕೆ ಯಾರೋ ದುಷ್ಕರ್ಮಿಗಳು ವಿಷಕಾರಿ ಆಂಶವನ್ನು ಹಾಕಿರಬಹುದು ಎಂದು ಶಂಕಿಸಲಾಗಿದೆ.
ಫುಡ್ ಪಾಯ್ಸನ್‍ನಿಂದ ಈ ರೀತಿ ಆಗಿರಬಹುದು. ರೋಗಿಗಳನ್ನು ಪರೀಕ್ಷೆ ಮಾಡಿದ ನಂತರ ನಿಖರ ಮಾಹಿತಿ ತಿಳಿಯಲಿದೆ ಎಂದು ವೈದ್ಯಾಧಿಕಾರಿ ಡಾ. ಗೀರಿಶ್ ತಿಳಿಸಿದ್ದಾರೆ.





