ವಿಚ್ಛೇದಿತ ಮಹಿಳೆಯ ಮನೆಗೆ ಬಂದು ದಾಂಧಲೆ: ದೂರು
ಮಂಗಳೂರು, ಎ. 29: ಎರಡು ತಿಂಗಳ ಹಿಂದೆ ವಿಚ್ಛೇದನಕ್ಕೊಳಗಾದ ಮಹಿಳೆಯ ಮನೆಗೆ ಬಂದು ದಾಂಧಲೆ ನಡೆಸಿದ ಬಗ್ಗೆ ಮಾಜಿ ಪತಿಯ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಪ್ಪು ರೈಲ್ವೆಟ್ರಾಕ್ ಬಳಿಯ ನಿವಾಸಿ ಮಹಿಳೆಗೆ 5 ವರ್ಷಗಳ ಹಿಂದೆ ಕುದ್ರೋಳಿಯ ಅಬ್ದುರ್ರಝಾಕ್ (38) ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ನಾಲ್ಕು ವರ್ಷದ ಮಗು ಇದೆ. ಇಬ್ಬರ ನಡುವಿನ ವೈಮನಸ್ಸಿನಿಂದಾಗಿ ಎರಡು ತಿಂಗಳ ಹಿಂದೆ ಪತಿ-ಪತ್ನಿ ವಿಚ್ಛೇದನಕ್ಕೊಳಗಾಗಿದ್ದರು. ಆದರೂ ಅಬ್ದುರ್ರಝಾಕ್ ರವಿವಾರ ಬೆಳಗ್ಗೆ ಜಪ್ಪುವಿನ ಮಹಿಳೆಯ ಮನೆಗೆ ಅಕ್ರಮ ಪ್ರವೇಶಗೈದು ರಾಡ್‌ನಿಂದ ಮನೆಯ ಕಿಟಕಿಯ ಬಾಗಿಲು ಮುರಿದು ದಾಂಧಲೆ ನಡೆಸಿದ್ದಾನೆ ಎಂದು ಮಹಿಳೆಯ ಅಜ್ಜಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





