ಬಜ್ಪೆ: ಪಿಎಫ್‌ಐ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು, ಎ. 29: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಮತ್ತು ಸುಂಕದಕಟ್ಟೆ ವಲಯ ಹಾಗೂ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದಲ್ಲಿ ಬಜ್ಪೆ ರೋಯಲ್ ಹೌಸ್ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಫ್.ಐ. ಬಜ್ಪೆ ಡಿವಿಷನ್ ಅಧ್ಯಕ್ಷ ಇಸ್ಮಾಯೀಲ್ ಎಂಜಿನಿಯರ್ ವಹಿಸಿದರು.
ವೇದಿಕೆಯಲ್ಲಿ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿ.ಮುಹಮ್ಮದ್, ಡಾ. ರಿತೇಶ್ ಶೆಟ್ಟಿ, ಅಲ್ ಹುದಾ ಜುಮಾ ಮಸೀದಿ ಸಮಿತಿಯ ಅಧ್ಯಕ್ಷ ಇಬ್ರಾಹೀಂ ಹಾಜಿ, ಕಾರ್ಯದರ್ಶಿ ಪಯಣಿಗ ಉಂಜಾಕ, ಹಿರಿಯ ನಾಗರಿಕ ಮುಹಮ್ಮದ್, ಸಾಯಿ ಮೆಡಿಕಲ್ನ ಮಾಲಕ ಚಂದ್ರಶೇಖರ್, ಕೆ.ಎಂ.ಸಿ.ಆಸ್ಪತ್ರೆಯ ಡಾ.ಮುಕುಂದ, ಪಿ.ಎಫ್.ಐ. ಬಜ್ಪೆ ಡಿವಿಷನ್ ಕಾರ್ಯದರ್ಶಿ ಮುಹಮ್ಮದ್ ರಿಯಾಝ್, ಪಿ.ಎಫ್.ಐ. ಮೆಡಿಕಲ್ ಉಸ್ತುವಾರಿ ಇಲ್ಯಾಸ್, ಪಿ.ಎಫ್.ಐ. ಬಜ್ಪೆ ಏರಿಯಾ ಅಧ್ಯಕ್ಷ ಆಸಿಫ್, ಸುಂಕದಕಟ್ಟೆ ಕಾರ್ಯದರ್ಶಿ ರಹ್ಮತುಲ್ಲಾ ಉಪಸ್ಥಿತರಿದ್ದರು.
Next Story





