ದ್ವಿತೀಯ ಪಿಯು ಫಲಿತಾಂಶ: ಕಲಾ ವಿಭಾಗದಲ್ಲಿ ಒಂದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲ 3 ಸ್ಥಾನ
ಕೂಲಿ ಕಾರ್ಮಿಕರ ಪುತ್ರಿ ಸ್ವಾತಿ ರಾಜ್ಯದಲ್ಲಿ ಪ್ರಥಮ

ಬಿ.ಸ್ವಾತಿ, ರಮೇಶ, ಕಾವ್ಯಾಂಜಲಿ
ಬಳ್ಳಾರಿ,ಎ.30: ಬಳ್ಳಾರಿಯ ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದ ಕೊಟ್ಟಪ್ಪ ಮತ್ತು ರತ್ನಮ್ಮ ದಂಪತಿಯ ಪುತ್ರಿ ಬಿ.ಸ್ವಾತಿ, 595 ಅಂಕಗಳನ್ನು ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ.
ಕೂಲಿ ಕಾರ್ಮಿಕರ ಮಗಳಾಗಿರುವ ಸ್ವಾತಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಷಯ ತಿಳಿಯುತ್ತಿದ್ದಂತೆ ಕಾಲೇಜಿನಲ್ಲಿ ಸಂಭ್ರಮ ಮನೆ ಮಾಡಿತ್ತು. ಕಾಲೇಜಿನ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸ್ವಾತಿಗೆ ಸಿಹಿ ತಿನಿಸಿ ಶುಭಾಶಯ ಕೋರಿದರು. ಸ್ವಾತಿ, ಕನ್ನಡ(98), ಸಂಸ್ಕೃತ(99), ಐಚ್ಛಿಕ ಕನ್ನಡ(99) ಇತಿಹಾಸ(100), ರಾಜ್ಯಶಾಸ್ತ್ರ(99) ಮತ್ತು ಶಿಕ್ಷಣ(100) ಅಂಕಗಳನ್ನು ಪಡೆದಿದ್ದಾರೆ.
ಇನ್ನು ಎರಡನೆ ಮತ್ತು ಮೂರನೆ ಸ್ಥಾನವನ್ನು ಇದೇ ಕಾಲೇಜಿನ ರಮೇಶ(593), ಕಾವ್ಯಾಂಜಲಿ(588) ಗಳಿಸಿದ್ದಾರೆ.
ವಾಣಿಜ್ಯ ವಿಭಾಗ: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ವಿದ್ಯಾಮಂದಿರ ದ್ವಿತೀಯ ಪಿಯುಸಿ ಕಾಲೇಜಿನ ವರ್ಷಿಣಿ ಎಂ.ಭಟ್, ವಾಣಿಜ್ಯ ವಿಭಾಗದಲ್ಲಿ 595 ಅಂಕ ಪಡೆದು ಈ ಸಾಧನೆ ಮಾಡಿದ್ದಾರೆ. ಅದೇ ರೀತಿ, ವಿವಿಎಸ್ ಸರ್ದಾರ್ ಪಟೇಲ್ ಕಾಲೇಜಿನ ಎಂ.ಕೃತಿ, ವಿಜ್ಞಾನ ವಿಭಾಗದಲ್ಲಿ 597 ಅಂಕಗಳ ಮೂಲಕ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.







