ಬಂಟ್ವಾಳ ತಾಲೂಕು ಅಖಿಲ ಭಾರತ ಬ್ಯಾರಿ ಪರಿಷತ್ ರಚನೆ

ಮಂಗಳೂರು, ಎ.30: ಬಂಟ್ವಾಳ ತಾಲೂಕು ಅಖಿಲ ಭಾರತ ಬ್ಯಾರಿ ಪರಿಷತ್ ಘಟಕದ ರಚನಾ ಸಭೆಯು ಇತ್ತೀಚೆಗೆ ಬಿ.ಸಿ.ರೋಡ್ ಶ್ರೀನಿವಾಸ ಹೊಟೇಲಿ ನಲ್ಲಿ ಜರುಗಿತು.
ಜಿಲ್ಲಾ ಘಟಕದ ಅಧ್ಯಕ್ಷ ಜೆ.ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸದಸ್ಯರಾದ ಎಸ್ ಹಸನಬ್ಬ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಇ.ಕೆ. ಹುಸೈನ್ ಕೂಳೂರು ಸ್ವಾಗತಿಸಿ, ವಂದಿಸಿದರು.
ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಎಸ್ ಹಸನಬ್ಬ ಫರಂಗಿಪೇಟೆ, ಉಪಾಧ್ಯಕ್ಷರಾಗಿ ಶಾಹುಲ್ ಹಮೀದ್ ನಂದಾವರ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಕೆ.ಎಸ್.ಅಬೂಬಕರ್ ಪಲ್ಲಮಜಲು, ಕೋಶಾಧಿಕಾರಿಯಾಗಿ ಎಂ. ಎಸ್. ಸಿದ್ದೀಕ್ ಫರಂಗಿಪೇಟೆ, ಜೊತೆ ಕಾರ್ಯದರ್ಶಿಯಾಗಿ ಲತೀಫ್ ನೇರಳಕಟ್ಟೆ, ಸಂಘಟನಾ ಕಾರ್ಯದರ್ಶಿಯಾಗಿ ಪಿ.ಎಂ.ಅಶ್ರಫ್, ಯು. ಮುಸ್ತಫಾ, ಎಂ.ಕೆ. ಅಬ್ದುಲ್ ಖಾದರ್, ಎ.ಎಂ. ಇಸ್ಮಾಯೀಲ್ ಕೊಡಾಜೆ, ಡಿ. ಹಬೀಬುಲ್ಲಾ ಕಣ್ಣೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಶೀರ್ ಹಂಡೇಲ್, ಫಾರೂಕ್, ವಿ. ಇಬ್ರಾಹೀಂ ಮುಡಿಪು, ಕೆ.ಎಚ್.ಮುಹಮ್ಮದ್, ನೌಫಾಲ್, ರಿಝ್ವಿ, ಅಶ್ರಫ್, ಎನ್.ಶಬೀರ್, ಎಂ. ಹಂಝ , ಅಬ್ದುಲ್ ಲತೀಫ್, ಕೆ.ಎಂ. ಅಶ್ರಫ್, ಎ.ಎಚ್. ಅಬ್ದುಲ್ ಸಲಾಂ, ಅಬ್ದುಲ್ ರಝಾಕ್ ಇರಾ ಆಯ್ಕೆಯಾಗಿದ್ದಾರೆ.





