ದ್ವಿತೀಯ ಪಿಯು ಫಲಿತಾಂಶ: ಐಶ್ವರ್ಯ ಭಟ್ ಗೆ 562 ಅಂಕ

ಮಂಗಳೂರು, ಎ. 30: ನಗರದ ಕೆನರಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಂ. ಐಶ್ವರ್ಯ ಭಟ್ ಕನ್ನಡದಲ್ಲಿ 78, ಇಂಗ್ಲಿಷ್‌ನಲ್ಲಿ 93, ಬಿಸಿನೆಸ್ ಸ್ಟಡೀಸ್‌ನಲ್ಲಿ 98, ಲೆಕ್ಕಶಾಸ್ತ್ರದಲ್ಲಿ 100, ಸಂಖ್ಯೆಶಾಸ್ತ್ರದಲ್ಲಿ 100, ಗಣಿತದಲ್ಲಿ 93 ಅಂಕಗಳೊಂದಿಗೆ 562 ಅಂಕ ಪಡೆದು ಶೇ.93.67 ಫಲಿತಾಂಶ ದಾಖಲಿಸಿದ್ದಾರೆ.
ಇವರು ಲೆಕ್ಕಪರಿಶೋಧಕ ಎಂ.ಬಿ. ರಾಮಭಟ್ ಹಾಗೂ ಎಂ. ರೇವತಿ ಆರ್.ಭಟ್ ದಂಪತಿಯ ಪುತ್ರಿ.
Next Story





