ತುಂಬೆ ಪದವಿ-ಪೂರ್ವ ಕಾಲೇಜಿಗೆ 94% ಫಲಿತಾಂಶ

ಶಮೀಮಾ ಶಾಝೀಯ, ಸವದ್ ಮುಹಮ್ಮದ್, ಅವ್ವಾ ನಿಶಾನಾ
ಬಂಟ್ವಾಳ, ಎ. 30: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಂಬೆ ಪದವಿ-ಪೂರ್ವ ಕಾಲೇಜಿನಿಂದ 138ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 129 ವಿದ್ಯಾರ್ಥಿಗಳು ಉತ್ತೀರ್ಣರಾಗಿ 94% ಫಲಿತಾಂಶ ದಾಖಲಾಗಿದೆ.
ಕಲಾ ವಿಭಾಗದಲ್ಲಿ 30ವಿದ್ಯಾರ್ಥಿಗಳು ಹಾಜರಾಗಿದ್ದು, 24ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 80% ಫಲಿತಾಂಶ ದಾಖಲಾಗಿದೆ. ಈ ಪೈಕಿ 8ಮಂದಿ ಪ್ರಥಮ ದರ್ಜೆ, 14ಮಂದಿ ದ್ವಿತೀಯ ದರ್ಜೆ ಹಾಗೂ 2 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 448ಅಂಕ ಗಳಿಸಿದ ಶಮೀಮಾ ಶಾಝೀಯ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾ.
ವಾಣಿಜ್ಯ ವಿಭಾಗದಿಂದ 70ವಿದ್ಯಾರ್ಥಿಗಳು ಹಾಜರಾಗಿದ್ದು, 70ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸತತ 25ವರ್ಷದಿಂದ 100% ಫಲಿತಾಂಶ ಸಾಧಿಸಲಾಗಿದೆ. ನಾಲ್ವರು ಡಿಸ್ಟಿಂಕ್ಷನ್, 63ವಿದ್ಯಾರ್ಥಿಗಳು ಪ್ರಥಮ ದರ್ಜೆ, ಮೂವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸವದ್ ಮುಹಮ್ಮದ್ 544 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿರುತ್ತಾನೆ.
ವಿಜ್ಞಾನ ವಿಭಾಗದಿಂದ 38ವಿದ್ಯಾರ್ಥಿಗಳು ಹಾಜರಾಗಿದ್ದು, 35ವಿದ್ಯಾರ್ಥಿಗಳು ಉತ್ತೀರ್ಣರಾಗಿ 92% ಫಲಿತಾಂಶ ಸಾಧಿಸಲಾಗಿದೆ. ಈ ಪೈಕಿ ನಾಲ್ವರು ಡಿಸ್ಟಿಂಕ್ಷನ್, 24 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಐವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆ, ಇಬ್ಬರು ತೃತೀಯ ದರ್ಜೆಯನ್ನು ಪಡೆದಿರುತ್ತಾರೆ. ಅವ್ವಾ ನಿಶಾನಾ 568ಅಂಕಪಡೆದು ಪ್ರಥಮ ಸ್ಥಾನ ಪಡೆದಿರುತ್ತಾಳೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.







