ಮೆಲ್ಕಾರ್ ಮಹಿಳಾ ಕಾಲೇಜಿಗೆ ಶೇ. 91 ಫಲಿತಾಂಶ

ಬಂಟ್ವಾಳ, ಎ. 30: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೆಲ್ಕಾರ್ ಮಹಿಳಾ ಕಾಲೇಜಿನಿಂದ 146ವಿದ್ಯಾರ್ಥಿನಿಯರು ಹಾಜರಾಗಿದ್ದು, ಈ ಪೈಕಿ 133 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ. 91 ಫಲಿತಾಂಶ ದಾಖಲಾಗಿರುತ್ತದೆ.
ಈ ಪೈಕಿ 14 ವಿದ್ಯಾರ್ಥಿನಿಯರು ಉನ್ನತ ಶ್ರೇಣಿ, 94 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯೊಂದಿಗೆ ಉತ್ತೀರ್ಣರಾಗಿರುತ್ತಾರೆ.
ವಿಭಾಗವಾರು: ಕಲಾ ವಿಭಾಗದ ರಂಶೀನಾ 555, ವಾಣಿಜ್ಯ ವಿಭಾಗದ ಬತುಲ್‌ಮುಹ್ಸಿನಾ 562, ವಿಜ್ಞಾನ ವಿಭಾಗದ ಸಮೀರಾ 517 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿರುತ್ತಾರೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





