‘ಕುಣಿಯೋಣು ಬಾರಾ’ ರಂಗ ತರಬೇತಿ ಶಿಬಿರ ಸಮಾರೋಪ

ಉಡುಪಿ, ಎ.30: ಮನುಷ್ಯನೊಳಗೆ ಜಾತಿ ಧರ್ಮ, ಗಂಡು ಹೆಣ್ಣು, ಕಪ್ಪು ಬಿಳುಪು, ಬಡವ ಶ್ರೀಮಂತ ಎಂಬುದನ್ನು ಮೀರಿದ ಕುಟುಂಬ ಭಾವನೆ ಮತ್ತು ಮನುಷ್ಯ ಪ್ರೀತಿ ಬೆಳೆಯಬೇಕಾದರೆ ರಂಗತರಬೇತಿ ಶಿಬಿರಗಳು ಅಗತ್ಯ. ನಾಟಕ ಮಾಧ್ಯಮಕ್ಕೆ ಅಂತಹ ದೊಡ್ಡ ಶಕ್ತಿ ಇದೆ ಎಂದು ಉಡುಪಿ ಯಕ್ಷಗಾನ ಕಲಾ ರಂಗದ ಕಾರ್ಯರ್ಶಿ ಮುರಳಿ ಕಡೆಕಾರ್ ಹೇಳಿದ್ದಾರೆ.
ಅಲೆವೂರು ಶಾಂತಿನಿಕೇತನ ಆಂಗ್ಲಮಾಧ್ಯಮ ಶಾಲೆ ಮತ್ತು ಪಟ್ಲ ಭೂಮಿ ಗೀತ ಸಾಂಸ್ಕೃತಿಕ ವೇದಿಕೆಯ ಜಂಟಿ ಆಶ್ರಯದಲ್ಲಿ ಅಲೆವೂರಿನ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ ಇತ್ತೀಚೆಗೆ ಆಯೋಜಿಸಲಾದ 15 ದಿನಗಳ ಕುಣಿ ಯೋಣು ಬಾರಾ ಮಕ್ಕಳ ರಂಗತರಬೇತಿ ಶಿಬಿರದ ಸಮಾರೋಪ ಸಮಾ ರಂದಲ್ಲಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ರಂಗನಟಿ ಪೂರ್ಣಿಮಾ ಸುರೇಶ್ ಮಾತನಾಡಿದರು. ಅಲೆವೂರು ಗ್ರೂಪ್ ಫಾರ್ ಎಜುಕೇಶನ್ ಕೋಶಾಧ್ಯಕ್ಷ ಹರೀಶ್ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಶಾಂತಿನಿಕೇತನ ಶಾಲಾ ಪ್ರಾಂಶುಪಾಲೆ ರೂಪಾ ಕಿಣಿ ಶಿಬಿರಾರ್ಥಿ ಗಳಿಗೆ ಪ್ರಮಾಣಪತ್ರವನ್ನು ವಿತರಿಸಿದರು.
ಸಂಚಾಲಕ ಅಲೆವೂರು ದಿನೇಶ್ ಕಿಣಿ, ರಂಗನಿರ್ದೇಶಕ ಜಯರಾಂ ನೀಲಾ ವರ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತರಿ ದ್ದರು. ಶಿಬಿರದ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಮಿಗೀತ ಸದಸ್ಯ ವಿಕ್ರಮ್ ಪಟ್ಲ ಸ್ವಾಗತಿಸಿದರು. ಅಧ್ಯಕ್ಷ ಸುಧೀರ್ ಕುಮಾರ್ ಪಟ್ಲ ವಂದಿಸಿದರು. ನಾಗೇಶ್ ಮರ್ಣೆ ಕಾರ್ಯಕ್ರಮ ನಿರೂಪಿಸಿದರು. ನಂತರ ಆರ್.ವಿ.ಭಂಡಾರಿಯವರ ಪ್ರೀತಿಯ ಕಾಳು ಮತ್ತು ಎಚ್.ಡುಂಡಿರಾಜ್‌ರವರ ಅಜ್ಜೀ ಕತೆ ನಾಟಕಗಳು ಪ್ರದರ್ಶನಗೊಂಡವು.







