ಅಂತಃಕರಣ ಪುಸ್ತಕ ಕ್ರಿಕೆಟ್ ಪ್ರಿಯರಿಗೆ ಮಾರ್ಗದರ್ಶಿ: ಕ್ರಿಕೆಟಿಗ ದೊಡ್ಡ ಗಣೇಶ್

ಬೆಂಗಳೂರು, ಎ.30: ಆಕ್ಷನ್, ಆಕ್ಷನ್ ದಿ ಡ್ರೀಮ್ ಟೀಮ್ಸ್ ಪುಸ್ತಕ ಐಪಿಎಲ್ ಟೆಂಡರ್ ಕುರಿತಂತೆ ಅಪರೂಪದ ಒಳನೋಟಗಳುಳ್ಳ ಪುಸ್ತಕವಾಗಿದ್ದು ಕ್ರಿಕೆಟ್ ಪ್ರಿಯರಿಗೆ ಮಾರ್ಗದರ್ಶಿಯಾಗಿದೆ ಎಂದು ಕ್ರಿಕೆಟಿಗ ದೊಡ್ಡ ಗಣೇಶ್ ಅಭಿಪ್ರಾಯಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಆಕ್ಷನ್, ಆ್ಯಕ್ಷನ್, ದಿ ಡ್ರೀಮ್ ಟೀಮ್ಸ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತಃಕರಣ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹದ್ದೊಂದು ಅದ್ಭುತವಾದ ಪುಸ್ತಕ ಬರೆದಿರುವುದು ಹೆಮ್ಮೆಯ ಸಂಗತಿ. ಈತನಿಗೆ ಕನ್ನಡಭಾಷೆಯಂತೆಯೇ ಇಂಗ್ಲಿಷಿನಲ್ಲಿಯೂ ಉತ್ತಮ ಹಿಡಿತವಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಐಪಿಎಲ್ ಪಂದ್ಯಗಳಲ್ಲಿ ಯುವ ಕ್ರಿಕೆಟಿಗರಿಗೆ ಐಪಿಎಲ್ ಪಂದ್ಯಗಳು ಉತ್ತಮ ಅವಕಾಶವನ್ನು ನೀಡಿವೆ ಎಂದು ತಿಳಿಸಿದರು.
‘ಆಕ್ಷನ್, ಆ್ಯಕ್ಷನ್, ದಿ ಡ್ರೀಮ್ ಟೀಮ್ಸ್’ ಪುಸ್ತಕವನ್ನು ಬೆನಕ ಬುಕ್ಸ್ ಬ್ಯಾಂಕ್ ಹೊರ ತಂದಿದೆ. ಕಾರ್ಯಕ್ರಮದಲ್ಲಿ ಪ್ರಕಾಶನ ಸಂಸ್ಥೆಯ ಡಾ.ಕೆ.ಶಿವರಾಮ್, ಹಿರಿಯ ಪತ್ರಕರ್ತ ವೆಂಕಟೇಶ್, ಲೇಖಕ ಸರ್ಜಾಶಂಕರ ಹರಳಿಮಠ ಸೇರಿ ಪ್ರಮುಖರಿದ್ದರು.





