Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಾಗರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ -...

ಸಾಗರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ - ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗಿದೆ ಅಖಾಡ

'ಕೈ' ಹಿಡಿಯಲಿದೆಯಾ 'ಮಾವ-ಅಳಿಯ'ನ ಮೈತ್ರಿ?

ವರದಿ : ಬಿ.ರೇಣುಕೇಶ್ವರದಿ : ಬಿ.ರೇಣುಕೇಶ್30 April 2018 10:54 PM IST
share
ಸಾಗರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ - ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗಿದೆ ಅಖಾಡ

ಶಿವಮೊಗ್ಗ, ಎ. 30: ವಿಧಾನಸಭೆ ಚುನಾವಣೆಗೆ ಪ್ರಮುಖ ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕಿಳಿಯುವ ಕಾರಣದಿಂದಲೇ ಕಳೆದ ಕೆಲ ತಿಂಗಳಿನಿಂದ ಸುದ್ದಿಯ ಕೇಂದ್ರ ಬಿಂಧುವಾಗಿದ್ದ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ, 'ಹೈ ವೋಲ್ಟೇಜ್' ಹಣಾಹಣಿಗೆ ವೇದಿಕೆ ಸಿದ್ದವಾಗಿದೆ. ಬಹುತೇಕ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ನೇರ ಹೋರಾಟಕ್ಕೆ ಕಣ ಸಜ್ಜಾಗಿದೆ. ಎರಡೂ ಪಕ್ಷಗಳ ಪ್ರಚಾರ ತಾರಕಕ್ಕೇರಿದೆ. ಭಾರೀ ಕುತೂಹಲ ಕೆರಳುವಂತೆ ಮಾಡಿದೆ. 

ಬಿಸಿಲ ಬೇಗೆಯ ರೀತಿಯಲ್ಲಿಯೇ ಚುನಾವಣಾ ಕಣ ಕಾವೇರಿದೆ. ಕಾಂಗ್ರೆಸ್ - ಬಿಜೆಪಿ ಅಭ್ಯರ್ಥಿಗಳಿಗೆ ಈ ಚುನಾವಣೆ ಅವರ ರಾಜಕೀಯ ಜೀವನದಲ್ಲಿ ಮಹತ್ವದ್ದಾಗಿದೆ. ಗೆಲ್ಲಲೇಬೇಕಾದ ಒತ್ತಡ, ಅನಿವಾರ್ಯತೆಯಲ್ಲಿದ್ದಾರೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂದಿರುವಂತೆ ಕಂಡರೂ, ಕೇಡರ್ ಆಧಾರಿತ ಬಿಜೆಪಿಗೆ, ತಳಮಟ್ಟದ ಸಂಘಟನೆಯೇ ಆ ಪಕ್ಷದ ಪ್ರಬಲ ಅಸ್ತ್ರವಾಗಿದೆ. 

ಅಂತಿಮ ಕ್ಷಣದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಿಜೆಪಿಗೆ ಸ್ಪೀಡ್‍ಗೆ ಅಡೆತಡೆ ಉಂಟಾಗುವಂತೆ ಮಾಡಿದೆ. ಈ ಅಡೆತಡೆಯನ್ನು ಯಾವ ರೀತಿಯಲ್ಲಿ ಬಿಜೆಪಿ ಎದುರಿಸಲಿದೆ ಎಂಬುವುದು ಯಕ್ಷಪ್ರಶ್ನೆಯಾಗಿದೆ. ಆದರೆ ಕ್ಷೇತ್ರದ ರಾಜಕೀಯ ಚಿತ್ರಣ ಗಮನಿಸಿದರೆ, ಬಿಜೆಪಿಯು ಕಾಂಗ್ರೆಸ್‍ಗೆ ಸುಲಭದ ತುತ್ತಲ್ಲ. ಹಾಗೆಯೇ ಬಿಜೆಪಿ ಕೂಡ ಅಷ್ಟು ಸುಲಭವಾಗಿ ಕಾಂಗ್ರೆಸ್‍ನ್ನು ಮಣಿಸಿ, ಕ್ಷೇತ್ರದಲ್ಲಿ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸಲು ಸಾಧ್ಯವಿಲ್ಲವಾಗಿದೆ. ಇದಕ್ಕಾಗಿ ಸಾಕಷ್ಟು ಬೆವರು ಹರಿಸುವುದರ ಜೊತೆಗೆ ಕಸರತ್ತು ನಡೆಸಬೇಕಾಗಿದೆ. 

ಮೈತ್ರಿ: ಅಜನ್ಮ ಶತ್ರುಗಳಂತಾಗಿದ್ದ ಕಾಗೋಡು ತಿಮ್ಮಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಒಟ್ಟಾಗಿರುವುದು ಮೇಲ್ನೋಟಕ್ಕೆ ಕಾಂಗ್ರೆಸ್ ಶಕ್ತಿ ಹೆಚ್ಚಾಗಿಸಿದೆ. ಸಂಬಂಧದಲ್ಲಿ ಮಾವ-ಅಳಿಯರಾಗಿರುವ ಈ ಜೋಡಿ, ಕಳೆದ ಹಲವು ವರ್ಷಗಳಿಂದ 'ಅಜನ್ಮ ಶತ್ರು;ಗಳಾಗಿ ಪರಿವರ್ತಿತರಾಗಿದ್ದರು. ಸಂಬಂಧಿಗಳೆಂಬುವುದನ್ನು ಮರೆತು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದರು. 

ಸಾಗರದಲ್ಲಿ ನಡೆದ ಹಿಂದಿನ ಮೂರು ಚುನಾವಣೆಯಲ್ಲಿ ಸತತ ಜಯ ಸಾಧಿಸಿದ್ದ ಕಾಗೋಡುರನ್ನು, 2004 ಹಾಗೂ 2008 ರ ಎರಡು ಚುನಾವಣೆಯಲ್ಲಿ ಬೇಳೂರು ಸೋಲಿಸಿದ್ದರು. ಇನ್ನೇನು ಕಾಗೋಡು ರಾಜಕೀಯ ಜೀವನ ಮುಕ್ತಾಯವಾಯಿತು ಎನ್ನುವ ಹಂತದಲ್ಲಿಯೇ 2013 ರ ಚುನಾವಣೆಯಲ್ಲಿ ಅವರಿಗೆ ಜಯ ಲಭಿಸಿತ್ತು. 

ತಿರುವು: ಮತ್ತೊಂದೆಡೆ ಕಳೆದ ಹಲವು ವರ್ಷಗಳಿಂದ ಬೇಳೂರು ಬಿಜೆಪಿಯಿಂದ ಕಣಕ್ಕಿಳಿಯುವ ತಯಾರಿ ನಡೆಸಿಕೊಂಡು ಬಂದಿದ್ದರು. ಆದರೆ ಹರತಾಳು ಹಾಲಪ್ಪಗೆ ಪಕ್ಷ ಮಣೆ ಹಾಕಿದ್ದು ಅವರನ್ನು ಕೆರಳಿಸಿತ್ತು. 'ಶತ್ರುವಿನ ಶತ್ರು ಮಿತ್ರ' ಎಂಬ ಮಾತಿನಂತೆ ಶತಾಯಗತಾಯ ಬಿಜೆಪಿ ಮಣಿಸಲು ಪಣ ತೊಟ್ಟ ಬೇಳೂರು, ಚುನಾವಣಾ ಕಣದಿಂದ ದೂರ ಉಳಿದು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಮಾವನಿಗೆ ಬೆಂಬಲವಾಗಿ ನಿಂತಿದ್ದಾರೆ. ಮಾವ-ಅಳಿಯನ ಮೈತ್ರಿ ಎಷ್ಟರ ಮಟ್ಟಿಗೆ ಫಲವಾಗಲಿದೆ ಎಂಬುವುದು ಇನ್ನಷ್ಟೆ ಗೊತ್ತಾಗಬೇಕಾಗಿದೆ. 

ಅಗ್ನಿ ಪರೀಕ್ಷೆ: ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಹರತಾಳು ಹಾಲಪ್ಪಗೆ ಈ ಚುನಾವಣೆ ನಿಜವಾಗಿಯೂ ಅಗ್ನಿ ಪರೀಕ್ಷೆಯಾಗಿದೆ. ಸೊರಬದಲ್ಲಿ ಕಣಕ್ಕಿಳಿಯಲು ಕಳೆದ ಹಲವು ವರ್ಷಗಳಿಂದ ತಯಾರಿ ನಡೆಸಿದ್ದರು. ಆದರೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ, ಪಕ್ಷದ ಸೂಚನೆಯಂತೆ ಹಾಲಪ್ಪರವರು ಒಲ್ಲದ ಮನಸ್ಸಿನಿಂದಲೇ ಸೊರಬದಿಂದ ಸಾಗರಕ್ಕೆ ಸ್ಥಳಾಂತರಗೊಳ್ಳುವಂತಾಯಿತು. ಅಂತಿಮ ಹಂತದಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪುವ ಆತಂಕಕ್ಕೂ ತುತ್ತಾಗುವಂತಾಯಿತು. ಟಿಕೆಟ್ ಘೋಷಣೆಯಾದ ನಂತರ ಭಿನ್ನಮತವನ್ನು ಎದುರಿಸುವಂತಾಯಿತು. 

ಪ್ರಸ್ತುತ ಹಾಲಪ್ಪರವರು ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತು ಹಾಕುತ್ತಿದ್ದಾರೆ. ಪ್ರಚಾರಕ್ಕೆ ಹೋಲಿಸಿದರೆ ಕಾಂಗ್ರೆಸ್ ಅಭ್ಯರ್ಥಿಗಿಂತ ಮುಂಚೂಣಿಯಲ್ಲಿದ್ದಾರೆ. ಈ ಹಿಂದೆ ಹೊಸನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಪ್ಪಗೆ, ಇದೀಗ ಆ ಕ್ಷೇತ್ರದ ಮುಕ್ಕಾಲು ಭಾಗ ಸಾಗರದೊಂದಿಗೆ ಸೇರ್ಪಡೆಯಾಗಿರುವುದು ಮತದಾರರ ಸಂಪರ್ಕ ಕೊಂಚ ಸುಲಭವಾಗುವಂತೆ ಮಾಡಿದೆ. 

ಜಾತಿ ಸಮೀಕರಣ: ಕ್ಷೇತ್ರದಲ್ಲಿ ಈಡಿಗ, ಬ್ರಾಹ್ಮಣ, ಮುಸ್ಲಿಂ, ಲಿಂಗಾಯತ ಮತ್ತಿತರ ಸಮುದಾಯಗಳ ಮತದಾರರು ಹೆಚ್ಚಿದ್ದಾರೆ. ಕಾಂಗ್ರೆಸ್ - ಬಿಜೆಪಿ ಅಭ್ಯರ್ಥಿಗಳಿಬ್ಬರು ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಎರಡೂ ಪಕ್ಷಗಳು ತಮ್ಮದೆ ಆದ ಜಾತಿ ಸಮೀಕರಣದ ಲೆಕ್ಕಾಚಾರ ನಡೆಸುತ್ತಿವೆ. ಪಕ್ಷ ಹಾಗೂ ವ್ಯಕ್ತಿಗತ ಆಧಾರದಲ್ಲಿ ಮತಗಳಿಕೆಯ ಲೆಕ್ಕಾಚಾರ ನಡೆಸುತ್ತಿವೆ. ಒಟ್ಟಾರೆ ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ನೇರ ಫೈಟ್ ಏರ್ಪಟ್ಟಿದ್ದು, ಯಾರಿಗೆ ಮತದಾರ ಮಣೆ ಹಾಕಲಿದ್ದಾರೆ ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. 

ಕಳೆದ ಚುನಾವಣೆಯ ಮತ ಲೆಕ್ಕಾಚಾರ
ಕಳೆದ ಚುನಾವಣೆಯಲ್ಲಿ ಕೆಜೆಪಿ-ಬಿಜೆಪಿ ಕಲಹದ ಸಂಪೂರ್ಣ ಲಾಭ ಪಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಾಗೋಡು ತಿಮ್ಮಪ್ಪರವರು 71,960 ಮತ ಗಳಿಸಿ ಆಯ್ಕೆಯಾಗಿದ್ದರು. ಇವರ ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ಬಿ.ಆರ್.ಜಯಂತ್‍ರವರು 30,712 ಮತ ಪಡೆದುಕೊಂಡಿದ್ದರು. ಜೆಡಿಎಸ್‍ನಿಂದ ಕಣಕ್ಕಿಳಿದಿದ್ದ ಬೇಳೂರು ಗೋಪಾಲಕೃಷ್ಣರವರು 23,217 ಹಾಗೂ ಬಿಜೆಪಿಯಿಂದ ಕಣಕ್ಕಿಳಿದಿದ್ದ ಶರಾವತಿ ಸಿ. ರಾವ್‍ರವರು ಕೇವಲ 5355 ಮತ ಗಳಿಸಿದ್ದರು. ಕಾಗೋಡುರವರ ಗೆಲುವಿನ ಅಂತರ 40,248 ಮತಗಳಾಗಿತ್ತು. 

ಕಣದಲ್ಲಿರುವ ಅಭ್ಯರ್ಥಿಗಳ ವಿವರ
ಪ್ರಸ್ತುತ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಗೋಡು ತಿಮ್ಮಪ್ಪ (ಕಾಂಗ್ರೆಸ್), ಹರತಾಳು ಹಾಲಪ್ಪ (ಬಿಜೆಪಿ), ಎಂ.ಬಿ.ಗಿರೀಶ್‍ಗೌಡ (ಜೆಡಿಎಸ್), ಕಲಾವತಿ (ಎಂಇಪಿ), ಪರಮೇಶ್ವರ್ (ಸ್ವರಾಜ್ ಇಂಡಿಯಾ), ಪಕ್ಷೇತರರಾಗಿ ಕೆ. ಲಕ್ಷ್ಮಣ, ಹರಟೆ ಗಾಮಪ್ಪ, ಪದ್ಮಾವತಿಯವರು ಕಣದಲ್ಲಿದ್ದಾರೆ. 
 

share
ವರದಿ : ಬಿ.ರೇಣುಕೇಶ್
ವರದಿ : ಬಿ.ರೇಣುಕೇಶ್
Next Story
X