ಮೇ 3ರಿಂದ ಯೆನೆಪೋಯ "ಯೆನ್‌ಸ್ಲ್ಪಾಶ್ - 2018"
ಮೂಡುಬಿದಿರೆ, ಎ.30: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ "ಯೆನ್‌ಸ್ಲ್ಪಾಶ್ - 2018" ಕಾರ್ಯಕ್ರಮದ ಅಂಗವಾಗಿ ಮೇ.3 ರಿಂದ 5ರವರೆಗೆ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ.
ಮೇ 3 ರಂದು ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಪ್ರಖ್ಯಾತ ನಟಿ ಹಾಗೂ ವೈದ್ಯೆಯಾಗಿರುವ ಡಾ. ದಿಶಾ ದಿನಕರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ.ಆರ್.ಜಿ.ಡಿಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ತಾಂತ್ರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಂತ್ರಿಕ ಪ್ರಬಂಧ ಮಂಡನೆ, ನೃತ್ಯ ಸ್ಪರ್ಧೆ, ಟ್ರೆಶರ್ ಹಂಟ್, ಕೋಡಿಂಗ್, ರಂಗೋಲಿ, ಮಿಮಿಕ್ರಿ, ಡಮ್ ಶರಾಡ್ಸ್, ಸರ್ಕ್ಯುಟ್ ಡಿ ಬಗ್ಗಿಂಗ್, ಮೆಗಾ ಸ್ಟ್ರಕ್ಚರ್, ಕೊಲಾಜ್, ಟೆನ್ನಿಕಾಯ್ಟಿ, ಗೇಮಿಂಗ್, 3 ಡಿ ಮಾಡೆಲಿಂಗ್, ವೆರೈಟಿ ಶೋ, ಹಾಡುಗಾರಿಕೆ, ಆರ್.ಸಿ. ರೇಸಿಂಗ್, ಫೊಟೋಗ್ರಾಫಿ, ಶಾರ್ಟ್ ಮೂವಿ, ಸೆಲ್ಫಿ, ಮೆಹಂದಿ, ಸೂಪರ್ ಮಿನಿಟ್, ಡ್ರಾಯಿಂಗ್, ಫ್ಯಾಶನ್ ಶೋ, ಎಥ್ನಿಕ್ ಡೇ ಮುಂತಾದ ಸ್ಪರ್ಧೆಗಳು ನಡೆಯಲಿದೆ. ವಿಜೇತರಿಗೆ ನಗದು ಹಾಗೂ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು.
ಮೇ 5 ರಂದು ಸಂಜೆ 4 ಗಂಟೆಗೆ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವವು ನಡೆಯಲಿದ್ದು, ನಿಟ್ಟೆ ಡೀಮ್ಡ್ ಯೂನಿವರ್ಸಿಟಿಯ ಪ್ರೊ.ವೈಸ್ ಛಾನ್ಸೆಲರ್ ಡಾ.ಎಂ.ಎಸ್. ಮೂಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಯೆನೆಪೋಯ ಡೀಮ್ಡ್ ಯೂನಿವರ್ಸಿಟಿಯ ಛಾನ್ಸೆಲರ್ ಯೆನೆಪೋಯ ಅಬ್ದುಲ್ಲಾ ಕುಂಞ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬಳಿಕ ಪ್ರಖ್ಯಾತ ಹಿನ್ನೆಲೆ ಹಾಗೂ ಪಾಪ್ ಸಂಗೀತಗಾರ್ತಿ ಬೆಂಗಳೂರಿನ ಸಂಗೀತಾ ರಾಜೀವ್ ಇವರಿಂದ ಸಂಗೀತ ರಸಸಂಜೆ ನಡೆಯಲಿದೆ ಎಂದು ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







