ಡೇರ್ಡೆವಿಲ್ಸ್ಗೆ ಸೋಲು
ಪಂತ್ ಹೋರಾಟ ವ್ಯರ್ಥ

ರಿಷಭ್ ಪಂತ್ 79 ರನ್(45ಎ, 7ಬೌ,4ಸಿ)
ಪುಣೆ, ಎ.30: ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ಐಪಿಎಲ್ ಟ್ವೆಂಟಿ-20 ಟೂರ್ನಿಯ 30ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ರನ್ಗಳ ಜಯ ಗಳಿಸಿದೆ.ಮಹಾರಾಷ್ಟ್ರ ಕ್ರಿಕೆಟ್ ಎಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 212 ರನ್ಗಳ ಸವಾಲು ಪಡೆದ ಡೇರ್ಡೆವಿಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 198 ರನ್ ಗಳಿಸಿತು.
ರಿಷಭ್ ಪಂತ್ 79 ರನ್(45ಎ, 7ಬೌ,4ಸಿ), ವಿಜಯ್ ಶಂಕರ್ ಔಟಾಗದೆ 54 ರನ್(31ಎ, 1ಬೌ,5 ಸಿ) ಗಳಿಸಿ ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರುವಲ್ಲಿ ಎಡವಿತು.ಮುನ್ರೊ 26ರನ್, ಶ್ರೇಯಸ್ ಅಯ್ಯರ್ 13ರನ್, ಪೃಥ್ವಿ ಶಾ 9ರನ್, ಮ್ಯಾಕ್ಸ್ವೆಲ್ 6ರನ್, ಟೆವಾಟಿಯಾ ಔಟಾಗದೆ 3 ರನ್ ಗಳಿಸಿದರು.ಚೆನ್ನೈ ತಂಡದ ಕೆ.ಎಂ.ಆಸಿಫ್ 43ಕ್ಕೆ 2, ಎನ್ಗಿಡಿ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದರು.
Next Story





